ಕರ್ನಾಟಕ

karnataka

ETV Bharat / state

ಕಲಬುರಗಿಯಲ್ಲಿ ಬರ್ಬರ ಕೊಲೆ.. ಮಗುವಿಗೆ ಹಾಲುಣಿಸುತ್ತಿದ್ದಾಗಲೇ ಪತ್ನಿಯ ಕತ್ತು ಸೀಳಿದ ಗಂಡ! - ಕಲಬುರಗಿ ಸುದ್ದಿ,

ಮಗುವಿಗೆ ಹಾಲುಣಿಸುವಾಗ ಪತ್ನಿಯನ್ನು ಪತಿಯೊಬ್ಬ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.

Husband killed wife,  Husband killed wife while breastfeeding to child,  Kalaburagi news,  Kalaburagi murder news,  ಪತ್ನಿಯನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ ಗಂಡ,  ಮಗುವಿಗೆ ಹಾಲುಣಿಸುತ್ತಿರುವ ಪತ್ನಿಯನ್ನು ಕೊಚ್ಚಿ ಕೊಲೆ ಮಾಡಿದ ಗಂಡ,  ಕಲಬುರಗಿ ಸುದ್ದಿ,  ಕಲಬುರಗಿ ಕೊಲೆ ಸುದ್ದಿ,
ಮಗುವಿಗೆ ಹಾಲುಣಿಸುತ್ತಿರುವ ಪತ್ನಿಯನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ ಗಂಡ

By

Published : Oct 23, 2021, 1:21 PM IST

Updated : Oct 23, 2021, 1:28 PM IST

ಕಲಬುರಗಿ:ಮಗುವಿಗೆ ಹಾಲುಣಿಸುವಾಗ ಪತ್ನಿಯನ್ನು ಪತಿಯೊಬ್ಬ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ನಗರದ ರಾಘವೇಂದ್ರ ಕಾಲೋನಿಯಲ್ಲಿ ನಡೆದಿದೆ‌. ನಸೀಮಾ ಬೇಗಂ (35) ಕೊಲೆಯಾದ ಮಹಿಳೆ. ಆಕೆಯ ಪತಿ ಇಬ್ರಾಹಿಂ ದುಷ್ಕೃತ್ಯ ಎಸಗಿರುವ ಆರೋಪಿ.

ಕುಡಿತಕ್ಕೆ ದಾಸನಾಗಿದ್ದ ಇಬ್ರಾಹಿಂ ಪತ್ನಿ ನಸೀಮಾಗೆ ಕಿರುಕುಳ ನೀಡುತ್ತಿದ್ದನು. ತವರು ಮನೆಯಿಂದ ಮದ್ಯ ಕುಡಿಯೋಕೆ ಹಣ ತರುವಂತೆ ಪೀಡಿಸುತ್ತಿದ್ದನು. ನಸೀಮಾ ಬೇಗಂ ತವರು ಮನೆಯಿಂದ ಹಣ ತರದ ಹಿನ್ನೆಲೆ ಇಬ್ರಾಹಿಂ ಆಕೆ ಮೇಲೆ ಕೋಪಗೊಂಡಿದ್ದನು. ಮಗುವಿಗೆ ಹಾಲುಣಿಸುತ್ತಿರುವಾಗ ಇಬ್ರಾಹಿಂನು ಮಾರಕಾಸ್ತ್ರದಿಂದ ನಸೀಮಾ ಕತ್ತುಸೀಳಿ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ಈ ಸುದ್ದಿ ಪೊಲೀಸರಿಗೆ ತಿಳಿದಿದ್ದು, ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಬಳಿಕ ಆರೋಪಿ ಇಬ್ರಾಹಿಂನನ್ನ ಪೊಲೀಸರು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.

ಈ ಕುರಿತು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Last Updated : Oct 23, 2021, 1:28 PM IST

ABOUT THE AUTHOR

...view details