ಕರ್ನಾಟಕ

karnataka

ETV Bharat / state

ಭೀಮಾ ನದಿಗೆ ಭಾರಿ ಪ್ರಮಾಣದ ನೀರು: ಜನರಲ್ಲಿ ಹೆಚ್ಚಿದ ಪ್ರವಾಹ ಭೀತಿ - ಭೀಮಾ ನದಿಗೆ ನೀರು

ಸೊನ್ನ ಬ್ಯಾರೇಜ್​ಗೆ ನೀರಿನ ಒಳ ಹರಿವು ಹೆಚ್ಚಳವಾಗಿದ್ದು, ಇಲ್ಲಿಂದ ಭೀಮಾ ನದಿಗೆ 1.12 ಲಕ್ಷ ಕ್ಯೂಸೆಕ್​ ನೀರನ್ನು ಹರಿಬಿಡಲಾಗುತ್ತಿದೆ. ಭೀಮಾ ನದಿಗೆ ಹೆಚ್ಚು ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವ ಹಿನ್ನೆಲೆ, ಅಫ್ಜಲ್​ಪುರ ತಾಲೂಕಿನ ಘತ್ತರಗಿ ಸೇತುವೆ ಸಂಪೂರ್ಣ ಮುಳುಗಡೆಯಾಗಿ ಸೇತುವೆ ಮೇಲೆ ನೀರು ಹರಿಯುತ್ತಿದೆ.

ಭೀಮಾ ನದಿಗೆ ಭಾರಿ ಪ್ರಮಾಣದ ನೀರು: ನದಿ ಪಾತ್ರದ ಜನರಲ್ಲಿ ಮತ್ತೆ ಪ್ರವಾಹ ಭೀತಿ

By

Published : Oct 23, 2019, 12:05 PM IST

ಕಲಬುರಗಿ:ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಉಜನಿ ಮತ್ತು ವೀರ್ ಜಲಾಶಯಗಳಿಂದ ಭೀಮಾ ನದಿಗೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ. ಪರಿಣಾಮ ನದಿ ಪಾತ್ರದ ಜನರಲ್ಲಿ ಮತ್ತೆ ಪ್ರವಾಹದ ಆತಂಕ ಎದುರಾಗಿದೆ.

ಭೀಮಾ ನದಿಗೆ ಭಾರಿ ಪ್ರಮಾಣದ ನೀರು: ನದಿ ಪಾತ್ರದ ಜನರಲ್ಲಿ ಮತ್ತೆ ಪ್ರವಾಹ ಭೀತಿ

ಸೊನ್ನ ಬ್ಯಾರೇಜ್ ನ ಒಳ ಹರಿವು ಹೆಚ್ಚಳವಾಗಿದ್ದು, ಬ್ಯಾರೇಜ್​ದಿಂದ ಭೀಮಾ ನದಿಗೆ 1.12 ಲಕ್ಷ ಕ್ಯೂಸೆಕ್​ ನೀರು ಹರಿಬಿಡಲಾಗುತ್ತಿದೆ. ಭೀಮಾ ನದಿಗೆ ಹೆಚ್ಚು ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವ ಹಿನ್ನೆಲೆ, ಅಫ್ಜಲ್​ಪುರ ತಾಲೂಕಿನ ಘತ್ತರಗಿ ಸೇತುವೆ ಸಂಪೂರ್ಣ ಮುಳುಗಡೆಯಾಗಿ ಸೇತುವೆ ಮೇಲೆ ನೀರು ಹರಿಯುತ್ತಿದೆ.

ಅಷ್ಟೆ ಅಲ್ಲದೇ, ದೇವಲಗಾಣಗಾಪುರ ಬಳಿಯ ಸೇತುವೆ ಕೂಡ ಮುಳುಗುವ ಸಾಧ್ಯತೆಯಿದೆ. ಅಫ್ಜಲ್​ಪುರ ತಾಲೂಕಿನ ಮಣ್ಣೂರಿನಲ್ಲಿ ಎಲ್ಲಮ್ಮ ದೇವಸ್ಥಾನ ಸೇತುವೆ ಮೇಲೆ ನೀರು ಬಂದಿರುವ ಪರಿಣಾಮ ಒಳಪ್ರವೇಶ ನಿರ್ಭಂದಿಸಲಾಗಿದೆ. ನದಿಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುವ ಸಾಧ್ಯತೆ ಇರುವುದರಿಂದ ನದಿ ಬಳಿ ತೆರಳದಂತೆ ಸ್ಥಳೀಯರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ.

ABOUT THE AUTHOR

...view details