ಕರ್ನಾಟಕ

karnataka

ETV Bharat / state

ಕೊರೊನಾ ಭೀತಿ: ಕಲಬುರಗಿ ಜಿಲ್ಲೆಗೆ ಮರಳಿದ ಜನರಿಗೆ ಹೋಂ​ ಕ್ವಾರಂಟೈನ್​​​

ಲಾಕ್​​ಡೌನ್​ ಸಡಿಲಿಕೆ ಹಿನ್ನೆಲೆ ರಾಜ್ಯದಲ್ಲಿ ಜನರಿಗೆ ಅವರ ಸ್ವಂತ ಊರುಗಳಿಗೆ ತೆರಳಲು ಅವಕಾಶ ನೀಡಲಾಗಿದೆ. ಈ ಹಿನ್ನೆಲೆ ಕಲಬುರಗಿಗೆ ಈವರೆಗೆ 7,539 ಜನ ಆಗಮಿಸಿದ್ದಾರೆ ಅಂತ ಮಹಾನಗರ ಪಾಲಿಕೆ ಆಯುಕ್ತರು ಮಾಹಿತಿ ನೀಡಿದ್ದಾರೆ.

Home Quarantine for All Travelers those who Returned to Kalburgi
ಕೊರೊನಾ ಭೀತಿ: ಕಲಬುರಗಿಗೆ ಮರಳಿದ ಎಲ್ಲಾ ಪ್ರಯಾಣಿಕರೂ ಹೋಮ್​ ಕ್ವಾರಂಟೈನ್​​​​

By

Published : May 9, 2020, 10:45 PM IST

ಕಲಬುರಗಿ: ಲಾಕ್‍ಡಾನ್ ಸಡಿಲಿಕೆ ಹಿನ್ನೆಲೆಯಲ್ಲಿ ಕಳೆದ 5 ದಿನದಲ್ಲಿ ಬೆಂಗಳೂರು, ಹುಬ್ಬಳ್ಳಿ ಮತ್ತು ಇತರೆ ಕಡೆಯಿಂದ ಕಲಬುರಗಿ ಜಿಲ್ಲೆಗೆ 7,539 ಜನ ವಲಸಿಗರು ಆಗಮಿಸಿದ್ದು, ಇದರಲ್ಲಿ ಕಲಬುರಗಿ ನಗರಕ್ಕೆ 728 ಜನ ಆಗಮಿಸಿದ್ದಾರೆ ಎಂದು ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತ ರಾಹುಲ್​ ಪಾಂಡ್ವೆ ತಿಳಿಸಿದ್ದಾರೆ. ವಲಸೆ ಬಂದವರೆಲ್ಲರಿಗೂ ಬಸ್ ನಿಲ್ದಾಣದಲ್ಲಿ ಥರ್ಮಲ್ ಸ್ಕ್ರೀನಿಂಗ್​ ಮಾಡಿ ಅವರೆಲ್ಲರ ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಕೊರೊನಾ ಭೀತಿ: ಕಲಬುರಗಿಗೆ ಮರಳಿದ ಎಲ್ಲಾ ಪ್ರಯಾಣಿಕರೂ ಹೋಂ​ ಕ್ವಾರಂಟೈನ್​​​​

ಜಿಲ್ಲೆಗೆ ಬಂದವರಿಗೆ ಆಹಾರ ಪೊಟ್ಟಣ, ಕುಡಿಯುವ ನೀರು ಮತ್ತು ಹಾಲು ನೀಡಿ ಮನೆಗಳಿಗೆ ತೆರಳಲು ವಾಹನದ ವ್ಯವಸ್ಥೆ ಮಾಡಿಕೊಡಲಾಗಿದೆ. ಕೈಗಳಿಗೆ ಹೋಂ​ ಕ್ವಾರಂಟೈನ್ ಸೀಲು ಹಾಕಿ ಗೃಹ ಬಂಧನದಲ್ಲಿರಲು ತಿಳಿಸಲಾಗಿದೆ ಎಂದರು.

ಬಂದವರಲ್ಲಿ ಯಾರಿಗಾದರು ಕೋವಿಡ್-19 ಲಕ್ಷಣ ಕಂಡುಬಂದಲ್ಲಿ ನಗರದ ಜಿಮ್ಸ್ ಅಥವಾ ಪಾಲಿಕೆಯಿಂದ ನಗರದ 4 ಕಡೆ ಸ್ಥಾಪಿಸಲಾದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಬಂದು ತಪಾಸಣೆ ಮಾಡಿಕೊಳ್ಳಬೇಕು ಎಂದು ಪಾಂಡ್ವೆ ಮನವಿ ಮಾಡಿದರು.

ಕಲಬುರಗಿ ನಗರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ನಗರದ ಜನರಲ್ಲಿ ಅರಿವು ಮೂಡಿಸಲು ನಗರದಲ್ಲೆಡೆ ಹೆದ್ದಾರಿ ಫಲಕ ಮತ್ತು ಜಾಹೀರಾತು ಫಲಕಗಳ ಮೇಲೆ ಅರಿವು ಮೂಡಿಸುವ ಬ್ಯಾನರ್ ಅಳವಡಿಸಲಾಗುತ್ತಿದೆ ಎಂದರು.

ಬ್ಯಾರಿಕೇಡ್ ಧ್ವಂಸಗೊಳಿಸಿದ್ದಲ್ಲಿ ಕಠಿಣ ಕ್ರಮ

ಕೊರೊನಾ ಸೋಂಕು ಪತ್ತೆಯಾದ ಕಲಬುರಗಿ ನಗರದ ವಿವಿಧೆಡೆ ಕಂಟೇನ್ಮೆಂಟ್ ಝೋನ್ ಘೋಷಿಸಿದಲ್ಲದೆ ಸುಗಮ ಸಂಚಾರಕ್ಕೆ ನಿರ್ಬಂಧ ಹೇರಿ ಒಂದೇ ಮಾರ್ಗದಲ್ಲಿ ಒಳ ಮತ್ತು ಹೊರ ಪ್ರವೇಶಕ್ಕಾಗಿ ಬ್ಯಾರಿಕೇಡ್ ಅಳವಡಿಸಲಾಗಿದೆ. ಕೆಲವು ಕಿಡಿಗೇಡಿಗಳು ಬ್ಯಾರಿಕೇಡ್ ಧ್ವಂಸಗೊಳಿಸುತ್ತಿರುವ ಬಗ್ಗೆ ಗಮನಕ್ಕೆ ಬಂದಿದ್ದು, ಅಂತವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದಾಗಿ ರಾಹುಲ್​ ಪಾಂಡ್ವೆ ಎಚ್ಚರಿಕೆ ನೀಡಿದರು.

ABOUT THE AUTHOR

...view details