ಕರ್ನಾಟಕ

karnataka

ETV Bharat / state

ಶಾರ್ಟ್​ ಸರ್ಕ್ಯೂಟ್​ನಿಂದ ಬೆಂಕಿ: ಮನೆಯಲ್ಲಿದ್ದ ವಸ್ತುಗಳೆಲ್ಲ ಭಸ್ಮ! - Home fires from an electric shot circuit

ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದ ಮನೆಗೆ ಬೆಂಕಿ ತಗುಲಿರುವ ಘಟನೆ ಕಲಬುರಗಿಯ ಗುಲಾಬವಾಡಿ ಬಡಾವಣೆಯಲ್ಲಿ ನಡೆದಿದೆ. ಈ ಅವಘಡದಲ್ಲಿ ಮನೆಯಲ್ಲಿದ್ದ ಬಟ್ಟೆ, ದವಸ-ಧಾನ್ಯಗಳ ಜೊತೆ ಸಹಕಾರಿ ಸಂಘದಲ್ಲಿ ಸಾಲ ಪಡೆದಿದ್ದ 1 ಲಕ್ಷ ರೂಪಾಯಿ ಸುಟ್ಟು ಭಸ್ಮವಾಗಿವೆ.

home-fires-from-an-electric-shot-circuit
ಶಾಟ್​ ಸರ್ಕ್ಯೂಟ್​ನಿಂದ ಮನೆಗೆ ಬೆಂಕಿ: ಮನೆಯಲ್ಲಿದ್ದ ವಸ್ತುಗಳು ಸುಟ್ಟು ಭಸ್ಮ

By

Published : Feb 5, 2021, 7:45 PM IST

ಕಲಬುರಗಿ: ವಿದ್ಯುತ್ ಶಾರ್ಟ್​​ ಸರ್ಕ್ಯೂಟ್​ನಿಂದ ಮನೆಗೆ ಬೆಂಕಿ ತಗುಲಿ, ಮನೆಯಲ್ಲಿದ್ದ ವಸ್ತುಗಳೆಲ್ಲ ಸುಟ್ಟು ಕರಕಲಾಗಿರುವ ಘಟನೆ ನಗರದ ಗುಲಾಬವಾಡಿ ಬಡಾವಣೆಯಲ್ಲಿ ನಡೆದಿದೆ.

ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಈ ಅವಘಡ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ಡ್ರೈವರ್ ಆಗಿ ಕಾರ್ಯನಿರ್ವಹಿಸುತ್ತಿರುವ ಗುಲಾಬವಾಡಿ ಬಡವಾಣೆಯ ಸಿದ್ದಪ್ಪ ಪಸ್ತಾಪುರ ಎಂಬುವರು ತಾಯಿ, ಪತ್ನಿ ಹಾಗೂ ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಇಂದು ಆತನ ತಾಯಿ ಹಾಗೂ ಪತ್ನಿ ಕೂಲಿ ಕೆಲಸಕ್ಕೆ ತೆರಳಿದ್ದು, ಮಕ್ಕಳು ಸಹ ಶಾಲೆಗೆ ಹೋಗಿದ್ದಾಗ ಈ ಅವಘಡ ಸಂಭವಿಸಿದೆ.

ಸಹಕಾರಿ ಸಂಘದಲ್ಲಿ ಪಡೆದಿದ್ದ ಸಾಲದ ಹಣ ಬೆಂಕಿಯಲ್ಲಿ ಭಸ್ಮ:ಸಿದ್ದಪ್ಪ ಅವರು ಮೊನ್ನೆಯಷ್ಟೇ ಸಹಕಾರಿ ಸಂಘದಲ್ಲಿ ಒಂದು ಲಕ್ಷ ಸಾಲ ತೆಗೆದುಕೊಂಡು ಮನೆಯಲ್ಲಿಟ್ಟಿದ್ದರು. ಏಕಾಏಕಿ ಸಂಭವಿಸಿದ ಶಾರ್ಟ್​​ ಸರ್ಕ್ಯೂಟ್​ನಿಂದ ಬಟ್ಟೆ, ದವಸ-ಧಾನ್ಯಗಳ ಜೊತೆ ಸಾಲ ಪಡೆದಿದ್ದ ಹಣವೂ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದು, ಬಡ ಕುಟುಂಬ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.

ABOUT THE AUTHOR

...view details