ಕಲಬುರಗಿ: ಕಲಬುರಗಿಯ ಸುಪ್ರಸಿದ್ಧ ಬಹಮನಿ ಕೋಟೆಯಲ್ಲಿ ದೇವಸ್ಥಾನವಿದೆ ಅದನ್ನು ಅಭಿವೃದ್ಧಿ ಪಡಿಸುವಂತೆ ಆಗ್ರಹಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆಗೆ ಇಳಿದಿದ್ದಾರೆ. ಕಲ್ಯಾಣ ಕರ್ನಾಟಕದ ಕೇಂದ್ರಸ್ಥಾನವಾದ ಕಲಬುರಗಿ ನಗರದ ಹೃದಯಭಾಗದಲ್ಲಿರುವ ಬಹುಮನಿ ಸುಲ್ತಾನರ ಕೋಟೆಯಲ್ಲೂ ದೇವಸ್ಥಾನವಿದೆ ಎನ್ನಲಾಗುತ್ತಿದ್ದು, ಈ ದೇವಸ್ಥಾನವನ್ನು ಬಹಮನಿ ಸುಲ್ತಾನರ ಆಳ್ವಿಕೆಯಲ್ಲಿ ನಿರ್ಮಾಣ ಮಾಡಲಾಗಿದೆ.
ಕೋಟೆಯಲ್ಲಿ ಈಶಾನ್ಯ ದಿಕ್ಕಿನಲ್ಲಿ ಸ್ವಯಂಭು ಸೋಮಲಿಂಗೇಶ್ವರ ದೇವಾಲಯ ಇದೆ ಎಂದು ಹಿಂದು ಸಂಘಟನೆಯ ಮುಖಂಡರು ವಾದಿಸುತ್ತಿದ್ದಾರೆ. ಬಹಮನಿ ಸುಲ್ತಾನರ ದೊರೆ ಹಸನ್ ಗಂಗು ಷಾ ಈ ಬಹಮನಿ ಕೋಟೆಯನ್ನು ನಿರ್ಮಿಸಿದ್ದ. ಸುಮಾರು 70 ಎಕರೆ ವಿಸ್ತೀರ್ಣದ ಬಹಮನಿ ಕೋಟೆಯೊಳಗೆ ಇದೀಗ ಸೋಮೇಲಿಂಗೇಶ್ವರ ದೇವಸ್ಥಾನ ಪತ್ತೆಯಾಗಿದೆ ಎಂಬುದು ಹಿಂದೂ ಮುಖಂಡರ ಮಾತು.
ಸ್ವಯಂಭೂ ದೇವಸ್ಥಾನವನ್ನು 12ನೇ ಶತಮಾನದ ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ನಿರ್ಮಾಣ ಮಾಡಲಾಗಿದೆ. ನಂತರ ಈ ದೇವಸ್ಥಾನದ ಮೇಲೆ ಬಹಮನಿ ಸುಲ್ತಾನರು ಆಕ್ರಮಣ ಮಾಡಿ ನಾಶ ಮಾಡಿದ್ದಾರೆ. ಇವತ್ತಿಗೂ ಕೂಡ ಅಲ್ಲಿ ನೂರಾರು ಮುಸ್ಲಿಂ ಕುಟುಂಬಗಳು ವಾಸ ಮಾಡುತ್ತಿವೆ. ಪುರಾತತ್ವ ಇಲಾಖೆಯ ನಿರ್ಲಕ್ಷ್ಯದಿಂದ ನೂರಾರು ವರ್ಷಗಳ ಇತಿಹಾಸ ಇರುವ ಸೋಮೇಶ್ವರನ ದೇವಸ್ಥಾನ ನಿರ್ಲಕ್ಷ್ಯಕ್ಕೆ ಒಳಗಾಗಿದೆ.
ಬಹಮನಿ ಕೋಟೆಯಲ್ಲಿ ದೇವಸ್ಥಾನವಿದೆ, ಅಭಿವೃದ್ಧಿ ಪಡಿಸಿ: ಹಿಂದೂ ಮುಖಂಡರ ಆಗ್ರಹ ಲಕ್ಷ್ಮೇಶ್ವರದಲ್ಲಿ ಸೋಮೇಶ್ವರ ದೇವಸ್ಥಾನ ಇದೆ. ಇದಕ್ಕೂ ಕಲಬುರಗಿ ನಗರದಲ್ಲಿನ ಕೋಟೆಯಲ್ಲಿನ ಸೋಮೇಶ್ವರ ದೇವಸ್ಥಾನಕ್ಕೆ ಸಾಮ್ಯತೆ ಇದೆ. ಸರ್ಕಾರದ ನಿರ್ಲಕ್ಷ್ಯದಿಂದ ಅದು ಶೀಥಿಲಾವಸ್ಥೆ ಕಾಣುತ್ತಿದೆ. ಕೂಡಲೇ ಸರ್ಕಾರ ಆ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಬೇಕು. ಒಂದು ವೇಳೆ ಸರ್ಕಾರ ನಿರ್ಲಕ್ಷ್ಯಿಸಿದರೆ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ:ಮಳಲಿ ಮಸೀದಿ ನವೀಕರಣ ವೇಳೆ ದೇವಾಲಯ ಶೈಲಿ ಪತ್ತೆ: ಮೇ 25ಕ್ಕೆ ತಾಂಬೂಲ ಪ್ರಶ್ನೆ