ಕಲಬುರಗಿ:ಕೊರೊನಾ ಆತಂಕದ ನಡುವೆ ಕಲಬುರಗಿಯಲ್ಲಿ ಖಾಸಗಿ ಶಾಲೆಗಳು ಶುಲ್ಕ ವಸೂಲಿಗೆ ಮುಂದಾಗಿವೆ ಎಂಬ ಆರೋಪ ಕೇಳಿ ಬರುತ್ತಿದೆ.
ಖಾಸಗಿ ಶಾಲೆಗಳಿಂದ ಶುಲ್ಕ ವಸೂಲಿ ಆರೋಪ: ಪ್ರತಿಭಟನೆಯ ಎಚ್ಚರಿಕೆ - Kalburgi '
ಕಲಬುರಗಿಯ ಕೆಲ ಖಾಸಗಿ ಶಾಲೆಗಳಲ್ಲಿ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ದಲಿತ ಸಂಘಟನೆ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಮತ್ತಿತರ ಸಂಘಟನೆಗಳ ಸದಸ್ಯರು ಆರೋಪಿಸಿದ್ದು, ಈ ಬಗ್ಗೆ ಶಿಕ್ಷಣ ಸಚಿವರು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಕಲಬುರಗಿಯಲ್ಲಿನ ಖಾಸಗಿ ಶಾಲೆಗಳು ಪೋಷಕರಿಗೆ ಫೀಸ್ ಕಟ್ಟುವಂತೆ ಒತ್ತಾಯಿಸಿತ್ತಿರುವುದಲ್ಲದೆ, ಫೋನ್ ಮಾಡಿ ಫೀಸ್ ಕಟ್ಟದಿದ್ದರೆ ನಿಮ್ಮ ಮಕ್ಕಳ ಅಡ್ಮಿಶನ್ ರದ್ದುಪಡಿಸುವುದಾಗಿ ಬೆದರಿಕೆ ಹಾಕಲಾಗುತ್ತಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಶಾಲೆಗಳು ಪುನರಾರಂಭಗೊಳ್ಳದಿದ್ದರೂ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ದಲಿತ ಸಂಘಟನೆ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಮತ್ತಿತರ ಸಂಘಟನೆಗಳ ಸದಸ್ಯರು ಖಾಸಗಿ ಶಾಲೆ ಆಡಳಿತ ಮಂಡಳಿ ವಿರುದ್ಧ ಗರಂ ಆಗಿದ್ದಾರೆ.
ಈ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ವಿಭಾಗೀಯ ಸಂಚಾಲಕ ಶೌಕತ್ ಅಲಿ ಆಲೂರ, ಶಾಲಾ-ಕಾಲೇಜುಗಳ ಶುಲ್ಕ ವಸೂಲಿ ಮೂರು ತಿಂಗಳ ಕಾಲ ಮುಂದೂಡಬೇಕು. ಇಲ್ಲಿಯವರೆಗೂ ಯಾವುದೇ ಶೈಕ್ಷಣಿಕ ಚಟುವಟಿಕೆ ಆರಂಭಗೊಂಡಿಲ್ಲ. ಹೀಗಿದ್ದರೂ ಫೀಸ್ ಕಟ್ಟುವಂತೆ ಒತ್ತಾಯಿಸಲಾಗುತ್ತಿದೆ. ಇದರಿಂದಾಗಿ ಪೋಷಕರು ಫೀಸ್ ಕಟ್ಟಲೇಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ಆದರೆ ಕೊರೊನಾ ಕಾರಣದಿಂದಾಗಿ ಫೀಸ್ ಕಟ್ಟೋದು ಕಷ್ಟವಾಗಿದೆ. ಕೂಡಲೇ ಫೀಸ್ ಕಟ್ಟುವಂತೆ ಒತ್ತಡ ತರುತ್ತಿರುವ ಶಾಲೆಗಳ ಮೇಲೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಶಾಲೆಗಳ ಮುಂದೆ ಉಗ್ರ ಹೋರಾಟ ಮಾಡೋದಾಗಿ ಎಚ್ಚರಿಕೆ ನೀಡಿದ್ದಾರೆ.