ಕರ್ನಾಟಕ

karnataka

ETV Bharat / state

ಹಿಜಾಬ್ ತೆಗೆದು ತರಗತಿಗೆ ಹಾಜರಾಗಿ ಎಂದಿದಕ್ಕೆ ತರಗತಿ ಬಹಿಷ್ಕರಿಸಿದ ವಿದ್ಯಾರ್ಥಿನಿಯರು - ಹಿಜಾಬ್ ವಿವಾದ ಹೈಕೋರ್ಟ್ ತೀರ್ಪು

Karnataka HC Verdict on Hijab : ನಮಗೆ ಹೈಕೋರ್ಟ್ ಆದೇಶದ ಬಗ್ಗೆ ಗೊತ್ತಿಲ್ಲ. ನಮಗೆ ಹಿಜಾಬ್ ಹಾಗೂ ಶಿಕ್ಷಣ ಎರಡು ಮುಖ್ಯ. ಹಿಜಾಬ್ ತೆಗೆದು ತರಗತಿಗೆ ಹಾಜರಾಗಿ ಎಂದು ಹೇಳುತ್ತಿದ್ದಾರೆ. ಹಾಗಾಗಿ, ನಾವು ಮನೆಗೆ ವಾಪಸ್ ಹೋಗುತ್ತಿದ್ದೇವೆ ಎಂದು ಕೆಲ ವಿದ್ಯಾರ್ಥಿನಿಯರು ಮಾಧ್ಯಮಗಳ ಮುಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ‌..

students boycott classes in  Kalburgi
ಕಲಬುರಗಿಯಲ್ಲಿ ತರಗತಿ ಬಹಿಷ್ಕರಿಸಿದ ವಿದ್ಯಾರ್ಥಿನಿಯರು

By

Published : Mar 16, 2022, 2:08 PM IST

ಕಲಬುರಗಿ : ಹೈಕೋರ್ಟ್ ಆದೇಶ ಪಾಲಿಸಿ ಹಿಜಾಬ್ ತೆಗೆದು ತರಗತಿಗೆ ಹಾಜರಾಗಿ ಎಂದಿದಕ್ಕೆ ಕೆಲ ವಿದ್ಯಾರ್ಥಿನಿಯರು ತರಗತಿಯನ್ನು ಬಹಿಷ್ಕರಿಸಿದ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಕಾಲೇಜಿನ ಪ್ರಿನ್ಸಿಪಾಲ್ ಹಿಜಾಬ್ ತೆಗೆದರೆ ಮಾತ್ರ ತರಗತಿ ಪ್ರವೇಶಕ್ಕೆ ಅವಕಾಶ ಎಂದಿದ್ದಕ್ಕೆ, ನಗರದ ಜಗತ್ ಬಡವಾಣೆಯಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಹಿಜಾಬ್ ತೆಗೆಯಲು ನಿರಾಕರಿಸಿ ಮನೆಗೆ ವಾಪಸ್​​ ಆಗಿದ್ದಾರೆ.

ಕಲಬುರಗಿಯಲ್ಲಿ ತರಗತಿ ಬಹಿಷ್ಕರಿಸಿದ ವಿದ್ಯಾರ್ಥಿನಿಯರು..

ಅಲ್ಲದೇ ನಗರದ ಹಳೆ ಜೇವರ್ಗಿ ರಸ್ತೆಯಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿಯೂ ಹಿಜಾಬ್ ತೆಗೆಯಲು ನಿರಾಕರಿಸಿದ ವಿದ್ಯಾರ್ಥಿನಿಯರು ಮನೆಗೆ ವಾಪಸ್​​ ತೆರಳಿದ್ದಾರೆ. ಕಲಬುರಗಿ ನಗರದ್ಯಾಂತ ಒಟ್ಟು 35ಕ್ಕೂ ಅಧಿಕ ವಿದ್ಯಾರ್ಥಿನಿಯರು ತರಗತಿ ಬಹಿಷ್ಕರಿಸಿದ್ದಾರೆ ಎಂದು ತಿಳಿದು ಬಂದಿದೆ.

ನಮಗೆ ಹೈಕೋರ್ಟ್ ಆದೇಶದ ಬಗ್ಗೆ ಗೊತ್ತಿಲ್ಲ. ನಮಗೆ ಹಿಜಾಬ್ ಹಾಗೂ ಶಿಕ್ಷಣ ಎರಡು ಮುಖ್ಯ. ಹಿಜಾಬ್ ತೆಗೆದು ತರಗತಿಗೆ ಹಾಜರಾಗಿ ಎಂದು ಹೇಳುತ್ತಿದ್ದಾರೆ. ಹಾಗಾಗಿ, ನಾವು ಮನೆಗೆ ವಾಪಸ್ ಹೋಗುತ್ತಿದ್ದೇವೆ ಎಂದು ಕೆಲ ವಿದ್ಯಾರ್ಥಿನಿಯರು ಮಾಧ್ಯಮಗಳ ಮುಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ‌.

ಇದನ್ನೂ ಓದಿ:ಹಿಜಾಬ್ ಗಲಭೆಗೆ ಕಾರಣವಾದ ಕಾಣದ ಕೈಗಳ ವಿರುದ್ಧ ತ್ವರಿತ ತನಿಖೆ ನಿರೀಕ್ಷಿಸುತ್ತೇವೆ: ಹೈಕೋರ್ಟ್

ABOUT THE AUTHOR

...view details