ಧಾರವಾಡ:ಸಂಶೋಧಕ ಹಾಗೂ ಚಿಂತಕ ಡಾ. ಎಂ ಎಂ ಕಲ್ಬುರ್ಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳ ಜಾಮೀನನ್ನು ಧಾರವಾಡ ಹೈಕೋರ್ಟ್ ಪೀಠ ನಿರಾಕರಿಸಿದೆ.
ಎಂ ಎಂ ಕಲಬುರ್ಗಿ, ಗೌರಿ ಲಂಕೇಶ್ ಹತ್ಯೆ ಆರೋಪಿಗಳ ಜಾಮೀನು ಅರ್ಜಿ ಹೈಕೋರ್ಟ್‌ನಿಂದ ವಜಾ.. - undefined
ಚಿಂತಕ ಡಾ. ಎಂ ಎಂ ಕಲ್ಬುರ್ಗಿಯ ಹತ್ಯೆ ಪ್ರಕರಣದಲ್ಲಿನ ಆರೋಪಿಗಳ ಜಾಮೀನನ್ನು ಧಾರವಾಡ ಹೈಕೋರ್ಟ್ ವಜಾಗೊಳಿಸಿದೆ.

ಎಂ.ಎಂ.ಕಲಬುರ್ಗಿ
ಧಾರವಾಡದ ಹೈಕೋರ್ಟ್ ಪೀಠ ಪ್ರಮುಖ ಆರೋಪಿಗಳಾದ ಗಣೇಶ ಮಿಸ್ಕಿನ ಮತ್ತು ಅಮಿತ್ ಬದ್ದಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನ ವಜಾಗೊಳಿಸಿದ. ಈ ಇಬ್ಬರು ಆರೋಪಿಗಳು ಗೌರಿ ಲಂಕೇಶ ಹತ್ಯೆಯಲ್ಲೂ ಕೂಡ ಭಾಗಿಯಾಗಿದ್ದಾರೆಂಬ ಆರೋಪ ಬಲವಾಗಿ ಕೇಳಿ ಬಂದಿದೆ. ಈ ಎಲ್ಲವನ್ನೂ ಮುಂದಿಟ್ಟುಕೊಂಡು ಧಾರವಾಡ ಹೈಕೋರ್ಟ್ ಆರೋಪಿಗಳಿಗೆ ಬೇಲ್ ಮಂಜೂರು ಮಾಡಿಲ್ಲ.