ಕಲಬುರಗಿ: ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರೆದಿದೆ. ರಾತ್ರಿಯಿಡೀ ಸುರಿದ ಧಾರಾಕಾರ ಮಳೆಯಿಂದ ಉದನೂರು ಗ್ರಾಮದ ಹಳ್ಳ ತುಂಬಿ ಹರಿಯುತ್ತಿದ್ದು, ಕಲಬುರಗಿ-ಉದನೂರು ರಸ್ತೆ ಸಂಪರ್ಕ ಕಡಿತವಾಗಿದೆ.
ವರುಣಾರ್ಭಟ: ಕಲಬುರಗಿ-ಉದನೂರು ರಸ್ತೆ ಸಂಪರ್ಕ ಕಡಿತ - ಕಲಬುರಗಿ ಮಳೆ ಸುದ್ದಿ
ಧಾರಾಕಾರ ಮಳೆಯಿಂದ ಉದನೂರು ಗ್ರಾಮದ ಹಳ್ಳ ತುಂಬಿ ಹರಿಯುತ್ತಿದ್ದು, ಕಲಬುರಗಿ-ಉದನೂರು ರಸ್ತೆ ಸಂಪರ್ಕ ಕಡಿತವಾಗಿದೆ.
ವರುಣಾರ್ಭಟ:ಕಲಬುರಗಿ-ಉದನೂರು ರಸ್ತೆ ಸಂಪರ್ಕ ಕಡಿತ
ಕಲಬುರಗಿ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ರಾತ್ರಿಯಿಡೀ ಮಳೆಯ ಅಬ್ಬರ ಜೋರಾಗಿತ್ತು. ವರುಣನ ಆರ್ಭಟದಿಂದ ಕಲಬುರಗಿ ತಾಲೂಕಿನ ಉದನೂರು ಗ್ರಾಮದ ಹಳ್ಳ ಸಂಪೂರ್ಣ ಭರ್ತಿಯಾಗಿ, ಕಲಬುರಗಿ-ಉದನೂರು ಗ್ರಾಮ ಸಂಪರ್ಕ ಕಡಿತವಾಗಿದೆ. ಅಲ್ಲದೆ ಕೃಷಿ ಭೂಮಿಗೆ ಮಳೆ ನೀರು ಆವರಿಸಿಕೊಂಡಿದ್ದು, ಅಪಾರ ಪ್ರಮಾಣದ ಬೆಳೆ ಹಾನಿ ಉಂಟಾಗಿದೆ.