ಕಲಬುರಗಿ:ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ಜನತೆ ತತ್ತರಗೊಂಡಿದ್ದು, ಮನೆಗಳು ಜಲಾವೃತಗೊಂಡಿವೆ. ನೀರಿನಲ್ಲಿ ಸಿಲುಕಿದ್ದವರನ್ನು ಪೊಲೀಸರು ರಕ್ಷಣೆ ಮಾಡುತ್ತಿದ್ದಾರೆ.
ಕಲಬುರಗಿಯಲ್ಲಿ ಭಾರಿ ಮಳೆ: ಪೊಲೀಸರಿಂದ ಜನರ ರಕ್ಷಣೆ - kalaburagi rain news
ಕಲಬುರಗಿ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ಜನತೆ ತತ್ತರಗೊಂಡಿದ್ದು, ಮನೆಗಳು ಜಲಾವೃತಗೊಂಡಿವೆ. ನೀರಿನಲ್ಲಿ ಸಿಲುಕಿದ್ದರನ್ನು ಪೊಲೀಸರು ರಕ್ಷಣೆ ಮಾಡುತ್ತಿದ್ದಾರೆ.
ಮಹಾ ಮಳೆಯಿಂದ ಮನೆಗೆ ಅಪಾರ ಪ್ರಮಾಣದ ನೀರು ನುಗ್ಗಿದ ಹಿನ್ನೆಲೆ ಮನೆಯಲ್ಲಿ ಸಿಕ್ಕಿಕೊಂಡ 22 ಜನರ ರಕ್ಷಣೆ ಮಾಡಲಾಗಿದೆ. ಚಿಂಚೋಳಿ ತಾಲೂಕಿನ ಚಂದಾಪುರ ಗ್ರಾಮದ ಹನುಮಾನ್ ನಗರದ ಬಡಾವಣೆಯ ಮನೆಯಲ್ಲಿ ಸಿಕ್ಕಿಕೊಂಡ ಜನರನ್ನು ಜೀವದ ಹಂಗನ್ನು ತೊರೆದು ಪಿ ಎಸ್ ಐ ವಿಶ್ವನಾಥರೆಡ್ಡಿ ಮತ್ತು ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಮನೆಯ ಛಾವಣಿ ಮತ್ತೊಂದು ಮನೆಗೆ ಮೆಟ್ಟಿಲು ಮೂಲಕ ಜನರ ಸಾಗಣೆ ಮಾಡಲಾಗಿದೆ. ಎದೆಯ ಮಟ್ಟಕ್ಕಿದ್ದ ನೀರಿನಲ್ಲಿ ಇಳಿದು ರಕ್ಷಣೆ ಮಾಡಲಾಗಿದೆ.
ಇನ್ನೊಂದೆಡೆ ಬೀದರ - ಚಿಂಚೊಳ್ಳಿ ಸೇತುವೆ ನಿರ್ಮಾಣ ಕಾಮಗಾರಿಗಾಗಿ ಆಗಮಿಸಿದ ಕಾರ್ಮಿಕರು ನೀರಿನಲ್ಲಿ ಸಿಲುಕಿದ್ದಾರೆ. ಬಿಹಾರ ಮೂಲದ ಮೂವರು ಕಾರ್ಮಿಕರನ್ನು ರಕ್ಷಿಸಲಾಗಿದೆ. ಸೇತುವೆ ನಿರ್ಮಾಣ ಸ್ಥಳದಲ್ಲಿಯೇ ಶೆಡ್ ಹಾಕಿಕೊಂಡು ವಾಸವಾಗಿದ್ದ ಕಾರ್ಮಿಕರು. ಮತ್ತೊಂದೆಡೆ ಚಿಂಚೋಳಿ ತಾಲೂಕಿನ ಗಾರಂಪಳ್ಳಿಯಲ್ಲಿಯೂ ಪ್ರವಾಹದಲ್ಲಿ ಸಿಲುಕಿಕೊಂಡಿರೋ ನಾಲ್ವರು ಕಾರ್ಮಿಕರು ಸಿಲುಕಿದ್ದು, ಅವರ ರಕ್ಷಣೆಗೆ ಪೊಲೀಸ್ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಪ್ರಯತ್ನ ಮಾಡುತ್ತಿದ್ದಾರೆ. ಚಿಂಚೋಳಿ ತಾಲೂಕಿನಲ್ಲಿ ಒಟ್ಟು 12 ಜನ ಪ್ರವಾಹದಲ್ಲಿ ಸಿಲುಕಿಕೊಂಡಿದ್ದು, ಕೆಲವರ ರಕ್ಷಣೆ ಮಾಡಲಾಗಿದೆ.