ಕರ್ನಾಟಕ

karnataka

ETV Bharat / state

ಸೇಡಂ ತಾಲೂಕಿನಲ್ಲಿ 799 ಮನೆಗಳು ಮಹಾಮಳೆಗೆ ಮುಳುಗಡೆ : ಠಾಣೆಗೂ ನುಗ್ಗಿದ ಮಳೆನೀರು

ಕಲಬುರಗಿ ಜಿಲ್ಲೆಯಲ್ಲಿ ಸುರಿದ ಮಹಾಮಳೆ ಭಾರಿ ಅವಾಂತರವನ್ನು ಸೃಷ್ಟಿಸಿದ್ದು, ಸೇಡಂ ತಾಲೂಕಿನ ಸುಮಾರು 799 ಮನೆಗಳಿಗೆ ನೀರು ನುಗ್ಗಿದೆ. 33 ಮನೆಗಳು ಕುಸಿದಿವೆ. ಮಾತ್ರವಲ್ಲ ಸೇಡಂ ಪಟ್ಟಣದ ಪೊಲೀಸ್ ಠಾಣೆಗೂ ಮಳೆನೀರು ನುಗ್ಗಿ, ಠಾಣೆಯ ಪ್ರಮುಖ ಕಡತಗಳು ನೀರು ಪಾಲಾಗಿವೆ.

heavy rain in sedum
ಮಹಾಮಳೆಗೆ ಮುಳುಗಡೆ

By

Published : Sep 18, 2020, 6:59 PM IST

ಸೇಡಂ (ಕಲಬುರಗಿ):ರಾಜ್ಯದ ಹಲವೆಡೆ ವರುಣ ಅಬ್ಬರಿಸುತ್ತಿದ್ದಾನೆ. ಇದೀಗ ಮಳೆರಾಯನ ರೌದ್ರಾವತಾರಕ್ಕೆ ಆರಕ್ಷಕರೂ ಆಸರೆ ನಿರೀಕ್ಷಿಸುವಂತಾಗಿದೆ.

ಸೇಡಂ ಪಟ್ಟಣದ ಪೊಲೀಸ್ ಠಾಣೆಗೆ ಮಳೆನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಮೊಣಕಾಲೆತ್ತರಕ್ಕೆ ಠಾಣೆಯಲ್ಲಿ ನೀರು ನಿಂತ ಪರಿಣಾಮ ಅನೇಕ ಕಡತಗಳು ಸಹ ನೀರು ಪಾಲಾಗಿವೆ.

799 ಮನೆಗಳಿಗೆ ನುಗ್ಗಿದ ನೀರು:

ಸೇಡಂ ತಾಲೂಕಿನ ಬಿಬ್ಬಳ್ಳಿ, ಬೆನಕನಹಳ್ಳಿ, ಮಳಖೇಡ, ಕುರಕುಂಟಾ, ಬಟಗೇರಾ, ಕೋಡ್ಲಾ, ಸಂಗಾವಿ, ಮುಧೋಳ ಸೇರಿದಂತೆ ಬಹುತೇಕ ಗ್ರಾಮಗಳು ವರುಣನ ಆರ್ಭಟಕ್ಕೆ ತುತ್ತಾಗಿವೆ. ತಾಲೂಕಿನಾದ್ಯಂತ ಸುಮಾರು 799 ಮನೆಗಳಿಗೆ ನೀರು ನುಗ್ಗಿದೆ. 33 ಮನೆಗಳು ಕುಸಿದಿವೆ. ಮನೆಯಲ್ಲಿ ಶೇಖರಿಸಿದ್ದ ಲಕ್ಷಾಂತರ ರೂ. ಮೌಲ್ಯದ ಆಹಾರ ಪದಾರ್ಥ, ಗೃಹೋಪಯೋಗಿ ವಸ್ತುಗಳು ನೀರು ಪಾಲಾಗಿವೆ. ಜೊತೆಗೆ ಜಾನುವಾರುಗಳು ಸಹ ನೀರಿನಲ್ಲಿ‌ ಕೊಚ್ಚಿಹೋಗಿವೆ ಎಂದು ತಿಳಿದು ಬಂದಿದೆ. ಮನೆಗಳಲ್ಲಿ ನೀರು ತುಂಬಿದ ಪರಿಣಾಮ ಒಪ್ಪೊತ್ತಿನ ಊಟಕ್ಕೂ ಜನ ಪರದಾಡುವಂತಾಗಿದೆ. ಜನ ಕೂರಲೂ ಸಹ ಸ್ಥಳವಿಲ್ಲದೆ ಆಶ್ರಯದ ನಿರೀಕ್ಷೆಯಲ್ಲಿದ್ದಾರೆ. ಚಿಂಚೋಳಿ, ಮಳಖೇಡ, ಬಟಗೇರಾ ಗ್ರಾಮಗಳಲ್ಲಿನ ನದಿಗಳು ತುಂಬಿ ಹರಿದ ಪರಿಣಾಮ ಮೇಲ್ಸೇತುವೆಗಳು ಸಂಪೂರ್ಣ ಮುಳುಗಡೆಯಾಗಿವೆ. ರಣಭೀಕರ ಮಳೆ ಇಡೀ ಸೇಡಂ ತಾಲೂಕನ್ನು ಜಲದಿಗ್ಭಂಧನ ಮಾಡಿದೆ.

ಗಂಜಿ ಕೇಂದ್ರ ಆರಂಭ:

ಪ್ರವಾಹಕ್ಕೆ ತುತ್ತಾಗಿ ಮನೆ ಕಳೆದುಕೊಂಡವರಿಗಾಗಿ ಗಂಜಿ ಕೇಂದ್ರದಲ್ಲಿ ಆಶ್ರಯ ನೀಡುವ ಕುರಿತು ಎಸಿ ರಮೇಶ ಕೋಲಾರ ಮತ್ತು ತಹಶೀಲ್ದಾರ್​​ ಬಸವರಾಜ ಬೆಣ್ಣೆಶಿರೂರ ಕ್ರಮ ಕೈಗೊಂಡಿದ್ದಾರೆ.

ABOUT THE AUTHOR

...view details