ಕಲಬುರಗಿ :ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು ಹಲವೆಡೆ ಅವಾಂತರ ಸಂಭವಿಸಿದೆ. ಕಲಬುರಗಿ ತಾಲೂಕಿನ ಹೊನ್ನಕಿರಣಗಿ ಗ್ರಾಮದಲ್ಲಿ ತುಂಬಿ ಹರಿಯುತ್ತಿರುವ ಹಳ್ಳದ ನೀರಿನಲ್ಲಿಯೇ ಗ್ರಾಮಸ್ಥರು ದಾಟುವ ಅನಿವಾರ್ಯತೆ ಎದುರಾಗಿದೆ.
ನಿನ್ನೆಯಿಂದ ಮತ್ತೆ ಮಳೆ ಅಬ್ಬರಿಸುತ್ತಿದ್ದು, ಹೊನ್ನಕಿರಣಗಿ ಜನರ ಪರದಾಟ ಮುಂದುವರೆದಿದೆ. ಊರಿನಿಂದ ಜನತಾ ಕಾಲೋನಿಗೆ ಹೋಗುವ ರಸ್ತೆ ಮಧ್ಯೆ ಹಳ್ಳ ತುಂಬಿ ಹರಿಯುತ್ತಿದೆ. ರಸ್ತೆ ಸಂಪರ್ಕ ಕಡಿತಗೊಂಡು ವಾಹನ ಸಂಚಾರಕ್ಕೆ ತೊಂದರೆ ಆಗಿದೆ. ಗ್ರಾಮದಲ್ಲಿ ಓಡಾಡುವುದು ಕೂಡ ದುಸ್ತರವಾಗಿದೆ.