ಕಲಬುರಗಿ: ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿ ವರುಣ ಅಬ್ಬರಿಸುತ್ತಿದ್ದು, ಕೆರೆ ಕಟ್ಟೆಗಳು ತುಂಬಿ ಜನಸಾಮಾನ್ಯರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕುರಿ ಮೇಯಿಸಲು ತೆರಳಿದಾಗ ಏಕಾಏಕಿ ಹಳ್ಳ ಬಂದು ಕುರಿಗಾಹಿಗಳು ಜೀವ ಉಳಿಸಿಕೊಳ್ಳಲು ಪರದಾಡಿದಂತಹ ಘಟನೆ ಚಿಂಚೋಳಿ ತಾಲೂಕಿನ ಧರ್ಮಸಾಗರ ತಾಂಡಾದಲ್ಲಿ ನಡೆದಿದೆ.
ತಾಂಡಾದ ಸುತ್ತಮುತ್ತಲಿನ ಹಳ್ಳ ಕೆರೆಗಳು ಮಳೆ ನೀರಿನಿಂದ ತುಂಬಿ ಹರಿಯುತ್ತಿವೆ. ಬೆಳಗ್ಗೆ ಕುರಿ ಮೇಯಿಸಲು ಹೋಗುವಾಗ ಇಲ್ಲದ ಹಳ್ಳ, ವಾಪಸ್ ಬರುವಾಗ ತುಂಬಿ ಹರಿಯುತ್ತಿದ್ದ ಪರಿಣಾಮ ಕುರಿಗಳ ಸಮೇತ ಕುರಿಗಾಹಿಗಳು ಸಿಲುಕಿ ಪರದಾಡಿದ್ದಾರೆ.