ಕಲಬುರಗಿ :ಕಳೆದೆರಡು ದಿನದಿಂದ ಜಿಲ್ಲೆಯಲ್ಲಿ ಸತತ ಮಳೆಯಾಗುತ್ತಿದ್ದು ಹಳ್ಳ-ಕೊಳ್ಳಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಇದರ ಪರಿಣಾಮ ಕಲಬುರಗಿ ತಾಲೂಕಿನ ಕಡಣಿ ಗ್ರಾಮದ ಹಳ್ಳ ಉಕ್ಕಿ ಹರಿದಿದ್ದು, ಸುಮಾರು 50ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗಿದೆ. ಮನೆಯಲ್ಲಿದ ದವಸ-ಧಾನ್ಯದ ಜೊತೆ ಜೊತೆಗೆ ಜಮೀನಿಗೆ ಹಾಕಲು ತಂದಿದ್ದ ರಸಗೊಬ್ಬರವೂ ನೀರು ಪಾಲಾಗಿದೆ. ಹೀಗಾಗಿ, ನಾಗರ ಪಂಚಮಿ ಹಬ್ಬದ ಸಂಭ್ರಮದಲ್ಲಿದ್ದ ಗ್ರಾಮದಲ್ಲಿ ಮಳೆರಾಯ ಬೇಸರ ಮೂಡಿಸಿದ್ದಾನೆ.
ಕಲಬುರಗಿ: ಪಂಚಮಿ ಹಬ್ಬದ ಹುಮ್ಮಸ್ಸಿನಲ್ಲಿದ್ದ ಜನರಿಗೆ ಬೇಸರ ಮೂಡಿಸಿದ ಮಳೆರಾಯ
ಅವರೆಲ್ಲ ನಾಗರ ಪಂಚಮಿ ಹಬ್ಬಕ್ಕೆಂದು ದವಸ-ಧಾನ್ಯಗಳನ್ನು ತಂದು ಮನೆಯಲ್ಲಿ ಕೂಡಿಟ್ಟಿದ್ದರು. ಆದರೆ ರಾತ್ರಿಯಿಡೀ ಸುರಿದ ಧಾರಾಕಾರ ಮಳೆಗೆ ಆ ಊರಿನ ಗ್ರಾಮಸ್ಥರು ಕಂಗಾಲಾಗಿದ್ದಾರೆ.
ಕಲಬುರಗಿಯಲ್ಲಿ ಭಾರೀ ಮಳೆಗೆ ಬೆಳೆ ಹಾನಿಯಾಗಿದೆ
ಕೊಚ್ಚಿ ಹೋದ ಕುಡುಕ: ಆಳಂದ ತಾಲೂಕಿನ ನಿಂಬರ್ಗಾ ಗ್ರಾಮದ ಹಳ್ಳ ತುಂಬಿ ಹರಿದಿದ್ದು, ಮದ್ಯದ ಅಮಲಿನಲ್ಲಿ ಅದೇ ಗ್ರಾಮದ ಶ್ರೀಪತಿ ಎಂಬ ವ್ಯಕ್ತಿ ಹಳ್ಳ ದಾಟಲು ಹೋಗಿ ನೀರು ಪಾಲಾಗಿದ್ದಾನೆ. ನಂತರ ಸ್ಥಳೀಯರ ಸಹಾಯದಿಂದ ಆತನನ್ನು ರಕ್ಷಣೆ ಮಾಡಲಾಗಿದೆ.
ಇದನ್ನೂ ಓದಿ :ತುಮಕೂರು: ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿ ಹೋದ ಶಿಕ್ಷಕ ಸಾವು