ಕರ್ನಾಟಕ

karnataka

ETV Bharat / state

ಆಳಂದ ತಾಲೂಕಿನಲ್ಲಿ ಮೇಘರಾಜನ ಆರ್ಭಟ.. ಸೊರಗಿದ್ದ ಅಮರ್ಜಾ ಜಲಾಶಯಕ್ಕೆ ಜೀವಕಳೆ.. - kalaburagi district latest news

ಭಾನುವಾರ ರಾತ್ರಿಯಿಂದ ಆಳಂದ ತಾಲೂಕಿನ ಹಲವೆಡೆ ಉತ್ತಮ ಮಳೆ ಸುರಿಯುತ್ತಿದೆ. ತಾಲೂಕಿ‌ನ ಬಹುತೇಕ ಹಳ್ಳ-ಕೊಳ್ಳಗಳು ಮೈದುಂಬಿ ಹರಿಯುತ್ತಿವೆ. ಮೂರು ವರ್ಷದಿಂದ ನೀರಿಲ್ಲದೆ ಸೊರಗಿದ್ದ ಅಮರ್ಜಾ ಜಲಾಶಯ ಶೇ. 40ರಷ್ಟು ಭರ್ತಿಯಾಗಿದೆ. 1.554 ಟಿಎಂಸಿ ಸಾಮರ್ಥ್ಯವುಳ್ಳ ಅಮರ್ಜಾ ಜಲಾಶಯಕ್ಕೆ ಸದ್ಯ 222.57 ಕ್ಯೂಸೆಕ್ ನೀರು ಒಳಹರಿವು ಇದೆ. ಆದರೆ, ಮಳೆ ಜನಜೀವನವನ್ನು ಅಸ್ತವ್ಯಸ್ಥಗೊಳಿಸಿದೆ.

ಮಳೆ

By

Published : Oct 21, 2019, 8:20 PM IST

ಕಲಬುರಗಿ:ಬರದಿಂದ ಕಂಗಾಲಾಗಿದ್ದ ಆಳಂದ ತಾಲೂಕಿನ ಹಲವೆಡೆ ಧಾರಾಕಾರ ಮಳೆ ಸುರಿದಿದೆ. ಇದರಿಂದಾಗಿ ಜನರಲ್ಲಿ ಹರ್ಷ ಮೂಡಿಸಿದೆ. ಕೆಲವೆಡೆ ಮಳೆ ನೀರಿನಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ರೆ, ಸುಮಾರು ದಿನಗಳಿಂದ ನೀರಿಲ್ಲದೆ ಬಣಗುಡುತ್ತಿದ್ದ ಅಮರ್ಜಾ ಜಲಾಶಯಕ್ಕೆ ನೀರು ಹರಿದು ಬರುತ್ತಿರುವುದು ಜನರ ಸಂತೋಷವನ್ನ ಇಮ್ಮಡಿಗೊಳಿಸಿದೆ.

ಆಳಂದ ತಾಲೂಕಿನಲ್ಲಿ ಮೇಘರಾಜನ ಆರ್ಭಟ..

ಭಾನುವಾರ ರಾತ್ರಿಯಿಂದ ಆಳಂದ ತಾಲೂಕಿನ ಹಲವೆಡೆ ಉತ್ತಮ ಮಳೆ ಸುರಿಯುತ್ತಿದೆ. ತಾಲೂಕಿ‌ನ ಬಹುತೇಕ ಹಳ್ಳ-ಕೊಳ್ಳಗಳು ಮೈದುಂಬಿ ಹರಿಯುತ್ತಿವೆ. ಮೂರು ವರ್ಷದಿಂದ ನೀರಿಲ್ಲದೆ ಸೊರಗಿದ್ದ ಅಮರ್ಜಾ ಜಲಾಶಯ ಶೇ. 40ರಷ್ಟು ಭರ್ತಿಯಾಗಿದೆ. 1.554 ಟಿಎಂಸಿ ಸಾಮರ್ಥ್ಯವುಳ್ಳ ಅಮರ್ಜಾ ಜಲಾಶಯಕ್ಕೆ ಸದ್ಯ 222.57 ಕ್ಯೂಸೆಕ್ ನೀರು ಒಳಹರಿವು ಇದೆ. ಆದರೆ, ಮಳೆ ಜನಜೀವನವನ್ನು ಅಸ್ತವ್ಯಸ್ಥಗೊಳಿಸಿದೆ.

ಆಳಂದ-ತಡಕಲ್,ಆಳಂದ-ನಿರಗುಡಿ ಒಳಗೊಂಡಂತೆ ಹಲವು ಹಳ್ಳಗಳು ಮೈದುಂಬಿ ಸೇತುವೆಗಳು ಜಲಾವೃತಗೊಂಡಿವೆ. ಪರಿಣಾಮ ರಸ್ತೆ ಸಂಪರ್ಕ ಕಡಿತಗೊಂಡು ವಾಹನಗಳ ಸಂಚಾರ ಸ್ಥಗಿತಗೊಂಡಿದೆ. ದಡದಿಂದ ದಡಕ್ಕೆ ಸೇರಲು ಜನ ಪರದಾಡುತ್ತಿದ್ದಾರೆ. ಸೇತುವೆ ಮೇಲಿನ ನೀರಿನ ಸೆಳವು ಇಳಿಯುವುದನ್ನೇ ಜನ ಕಾಯುತ್ತಿದ್ದಾರೆ.

ABOUT THE AUTHOR

...view details