ಕಲಬುರಗಿ: ಜಿಲ್ಲೆಯಲ್ಲಿ ಮಳೆಯ ಅಬ್ಬರ ಒಂದಿಷ್ಟು ಕಡೆಮೆಯಾಗಿದೆ. ಆದರೆ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದ ಭೀಮಾ ನದಿಗೆ ಹರಿದು ಬರುತ್ತಿರುವ ನೀರಿನಿಂದ ಜಿಲ್ಲೆಯಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಭೀಮಾ ನದಿಗೆ ಅಧಿಕ ನೀರು ಬಿಡುಗಡೆ: ಕಲಬುರಗಿ ಜನತೆಗೆ ಪ್ರವಾಹ ಭೀತಿ
ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದ ಭೀಮಾ ನದಿಗೆ ಅಧಿಕ ನೀರು ಹರಿದು ಬರುತ್ತಿದೆ. ಇದರಿಂದಾಗಿ ಕಲಬುರಗಿ ಜಿಲ್ಲೆಯಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಭೀಮಾ ನದಿಯ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾದ ಹಿನ್ನೆಲೆ ನೀರಿನ ಮಟ್ಟ ಹೆಚ್ಚಿತ್ತು. ಹೀಗಿರುವಾಗಲೇ ಮಹಾರಾಷ್ಟ್ರದ ಉಜ್ಜನಿ ಜಲಾಶಯದಿಂದ ಮತ್ತು ವೀರ್ ಜಲಾಶಯದಿಂದ 123 ಸಾವಿರ ಕ್ಯೂಸೆಕ್ಗೂ ಅಧಿಕ ನೀರು ಭೀಮಾ ನದಿಗೆ ಹರಿಬಿಡಲಾಗಿದೆ. ಇದರಿಂದಾಗಿ ಘತ್ತರಗಿ ಗಾಣಗಾಪುರ ಬ್ರಿಡ್ಜ್ ಮೇಲೆ ಸುಮಾರು ನಾಲ್ಕೈದು ಅಡಿ ಎತ್ತರದಿಂದ ನೀರು ಹರಿಯುತ್ತಿದೆ.
ಅಫಜಲಪುರ, ಜೇವರ್ಗಿ, ಕಲಬುರಗಿ, ಚಿತ್ತಾಪುರ ತಾಲೂಕಿನ ನೂರಾರು ಗ್ರಾಮಗಳಲ್ಲಿ ಜಲ ಪ್ರವಾಹ ಉಂಟಾಗಿದೆ. ಹೊಲಗಳು ಜಲಾವೃತವಾಗಿವೆ. ಗ್ರಾಮಗಳು ನಡುಗಡ್ಡೆಯಾಗುವ ಆತಂಕ ಎದುರಾಗಿದೆ. ಮುಂದಿನ 48 ಗಂಟೆಯಲ್ಲಿ ಸುಮಾರು 2.5 ಲಕ್ಷ ಕ್ಯೂಸೆಕ್ ನೀರು ಸೊನ್ನ ಬ್ಯಾರೇಜ್ಗೆ ಬರುವ ನಿರೀಕ್ಷೆ ಇದೆ. ಇಷ್ಟು ಪ್ರಮಾಣದಲ್ಲಿ ನೀರು ಬಂದರೆ ಭೀಮಾ ನದಿಯಲ್ಲಿ ಭಾರೀ ಪ್ರಮಾಣದ ಪ್ರವಾಹ ಉಂಟಾಗಲಿದೆ.