ಸೇಡಂ :ಪಟ್ಟಣದಲ್ಲಿ ಶನಿವಾರ ಸಂಜೆ ಗಡಿ ಭಾಗದ ಕೆಲ ಗ್ರಾಮಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ ಸುರಿದಿದ್ದರಿಂದ ಮನೆಗಳ ಮೇಲ್ಛಾವಣಿ ಹಾರಿಹೋಗಿರುವ ಘಟನೆ ನಡೆದಿದೆ.
ಸೇಡಂನಲ್ಲಿ ಬಿರುಗಾಳಿ ಸಹಿತ ಸುರಿದ ಮಳೆಗೆ ಹಾರಿದ ಮನೆಗಳ ಮೇಲ್ಛಾವಣಿ!! - rain sedam
ಸಣ್ಣ ಪುಟ್ಟ ನದಿ, ನಾಲೆಗಳು ತುಂಬಿ ಹರಿದ ಪರಿಣಾಮ ಕೆಲವೆಡೆ ನೀರು ರಸ್ತೆಯ ಮೇಲೆ ಹರಿದಿದೆ. ಇದರಿಂದ ಸಂಚಾರಕ್ಕೆ ತೊಂದರೆಯುಂಟಾಗಿದೆ ಎಂದು ತಿಳಿದು ಬಂದಿದೆ.
ಮಳೆಗೆ ಹಾರಿದ ಮನೆಗಳ ಮೇಲ್ಛಾವಣಿ
ಗಡಿಯ ಮೋತಕಪಲ್ಲಿ, ಶಕಲಾಸಪಲ್ಲಿ ಸೇರಿ ಕೆಲ ಭಾಗಗಳಲ್ಲಿ ಭಾರಿ ಮಳೆಯಾಗಿದ್ದರ ಪರಿಣಾಮ ಸುಮಾರು 25 ಮನೆಗಳ ಮೇಲ್ಛಾವಣಿ ಹಾರಿಹೋದರೆ, 20-25 ಎಕರೆಯಲ್ಲಿದ್ದ ಕವಳಿ ಗದ್ದೆ ಮಳೆಗೆ ಕೊಚ್ಚಿ ಹೋಗಿದೆ ಎನ್ನಲಾಗಿದೆ. ಇನ್ನು ಸಣ್ಣ ಪುಟ್ಟ ನದಿ, ನಾಲೆಗಳು ತುಂಬಿ ಹರಿದ ಪರಿಣಾಮ ಕೆಲವೆಡೆ ನೀರು ರಸ್ತೆಯ ಮೇಲೆ ಹರಿದಿದೆ. ಇದರಿಂದ ಸಂಚಾರಕ್ಕೆ ತೊಂದರೆಯುಂಟಾಗಿದೆ ಎಂದು ತಿಳಿದು ಬಂದಿದೆ.
ಒಂದೆಡೆ ಕೊರೊನಾ ಹಾವಳಿಯಿಂದ ನಲುಗಿರುವ ಬಡವರು ಮತ್ತು ರೈತರಿಗೆ ಈ ರಭಸವಾಗಿ ಸುರಿದ ಮಳೆ ತೀವ್ರ ಆಘಾತ ತಂದೊಡ್ಡಿದೆ.