ಕಲಬುರಗಿ:ನಗರದ 75 ವರ್ಷದ ವೃದ್ಧೆಗೆ ಕೊರೊನಾ ದೃಢವಾಗಿದ್ದು ಆರೋಗ್ಯ ಇಲಾಖೆ ಸಿಬ್ಬಂದಿ ಅವರನ್ನು ಕೋವಿಡ್ ಆಸ್ಪತ್ರೆಗೆ ಕರೆದುಕೊಂಡು ಹೋಗದೆ ಮನೆಯಲ್ಲೇ ಬಿಟ್ಟಿದ್ದಾರೆ. ಇದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊರೊನಾ ದೃಢಪಟ್ಟ ವೃದ್ಧೆಯನ್ನು ಆಸ್ಪತ್ರೆಗೆ ಕರೆದೊಯ್ಯದ ಆರೋಗ್ಯ ಇಲಾಖೆ ಸಿಬ್ಬಂದಿ - kalburagi Health Department
ಕಲಬುರಗಿ ನಗರದ ಅತ್ತರ್ ಕಂಪೌಂಡ್ ನಿವಾಸಿ 75 ವರ್ಷದ ವೃದ್ಧೆಗೆ ಕೊರೊನಾ ದೃಢಪಟ್ಟಿದ್ದರೂ ಕೂಡ ಆರೋಗ್ಯ ಇಲಾಖೆ ಸಿಬ್ಬಂದಿ ಆಕೆಯನ್ನು ಕೋವಿಡ್ ಆಸ್ಪತ್ರೆಗೆ ಕರೆದುಕೊಂಡು ಹೋಗದೆ ಮನೆಯಲ್ಲೇ ಬಿಟ್ಟುಹೋದ ಘಟನೆ ನಡೆದಿದೆ.

ಅತ್ತರ್ ಕಂಪೌಂಡ್ ಕಟ್ಟಡದ 3ನೇ ಮಹಡಿಯಲ್ಲಿ ಕೊರೊನಾ ಸೋಂಕಿತ ವೃದ್ಧೆ ವಾಸಿಸುತ್ತಿದ್ದಾರೆ. ಇವರ ಕಾಲು ಊನವಾಗಿದ್ದು ಆ್ಯಂಬುಲೆನ್ಸ್ ಬಳಿ ನಡೆದುಕೊಂಡು ಬರಲಾಗಿಲ್ಲ. ಅಲ್ಲದೇ, ಈ ವೇಳೆ ಇಬ್ಬರು ಮಹಿಳೆಯರೇ ಇದ್ದುದರಿಂದ ಅವರಿಗೂ ಕೂಡ ಅವರನ್ನು ಎತ್ತಿಕೊಂಡು ಬರಲಾಗಿಲ್ಲ. ಹೀಗಾಗಿ ಆ್ಯಂಬುಲೆನ್ಸ್ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆಯವರು ವೃದ್ಧೆಯನ್ನು ಕರೆದುಕೊಂಡು ಹೋಗದೆ ಹಾಗೆಯೇ ವಾಪಸ್ಸಾದರು ಎಂದು ತಿಳಿದುಬಂದಿದೆ.
ಆರೋಗ್ಯ ಇಲಾಖೆಯವರಿಗೆ ಬೆಳಗ್ಗೆ ಕೂಡ ಈ ಬಗ್ಗೆ ಕರೆ ಮಾಡಿದ್ದು, ಯಾರೂ ಸಹ ಸ್ಪಂದಿಸಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸಂಬಂಧಿಕರು ರೋಗಿಯನ್ನು ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ ಎಂಬ ಮಾಹಿತಿ ದೊರೆತಿದೆ.