ಕರ್ನಾಟಕ

karnataka

ETV Bharat / state

ಮೋದಿ ಬೆಂಬಲಿಸಿದ್ದಕ್ಕೆ ಮುಖ್ಯೋಪಾಧ್ಯಯ ಅಮಾನತು - ಕಲಬುರಗಿ ಡಿ.ಡಿ.ಪಿ.ಐ ಆದೇಶ

ಸಮಾಜಿಕ ಜಾಲತಾಣಗಳಲ್ಲಿ ಮೋದಿ ಪರವಾಗಿ ಪ್ರಚಾರ ಮಾಡಿದ ಹಿನ್ನೆಲೆ ಶಾಲೆಯ ಮುಖ್ಯೋಪಾಧ್ಯಯನನ್ನ ಶಿಕ್ಷಣ ಇಲಾಖೆ ಅಮಾನತುಗೊಳಿಸಿ ಆದೇಶಿಸಿದೆ.

ಮೋದಿ ಬೆಂಬಲಿಸಿದ್ದಕ್ಕೆ ಮುಖ್ಯೋಪಾಧ್ಯಯ ಅಮಾನತು

By

Published : Mar 30, 2019, 6:46 PM IST

ಕಲಬುರಗಿ: ಸೋಷಿಯಲ್ ಮೀಡಿಯಾದಲ್ಲಿ ಬಿಜೆಪಿ ಪಕ್ಷದ ಪರವಾಗಿ ಪ್ರಚಾರ ಮಾಡಿದ ಆರೋಪದ ಹಿನ್ನೆಲೆ ಶಾಲೆಯ ಮುಖ್ಯೋಪಾಧ್ಯಯರೊಬ್ಬರನ್ನು ಅಮಾನತುಗೊಳಿಸಿ ಕಲಬುರಗಿ ಡಿಡಿಪಿಐ ಆದೇಶ ಹೊರಡಿಸಿದ್ದಾರೆ.

ಅಫಜಲಪುರ ತಾಲೂಕು ಗಾಣಗಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಯ ಲಕ್ಷ್ಮಣ ಜೋಗುರು ಅಮಾನತುಗೊಂಡಿದ್ದಾರೆ. ವಾಟ್ಸಪ್‌ನಲ್ಲಿ ಬಿಜೆಪಿ ಪರ ಪ್ರಚಾರ ಮತ್ತು ಫೇಸ್​​ಬುಕ್​​ನಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಬೆಂಬಲಿಸಿ ಫೋಟೋ ಅಪ್‌ಲೋಡ್ ಮಾಡಿದ್ದಾರೆಂಬ ಆರೋಪದ ಹಿನ್ನೆಲೆ ಚುನಾವಣಾಧಿಕಾರಿಗಳಿಗೆ ದೂರು ನೀಡಲಾಗಿತ್ತು.

ವಿಚಾರಣೆ ಕಾಯ್ದಿರಿಸಿ ಕಲಬುರಗಿಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಹಾಗೂ ನಿಯಂತ್ರಣಾಧಿಕಾರಿಯಾದ ಶಾಂತಗೌಡ ಪಾಟೀಲ್‌, ಮುಖ್ಯೋಪಾಧ್ಯಾಯ ಜೋಗೂರ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ABOUT THE AUTHOR

...view details