ಕಲಬುರಗಿ:ಕೋವಿಡ್ ಸೋಂಕಿತ ವ್ಯಕ್ತಿ ನರಳಿ ನರಳಿ ಕೊನೆಯುಸಿರೆಳಿದ್ದದನ್ನು ಕಂಡು ಪಕ್ಕದ ಬೆಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹೆಡ್ ಕಾನ್ಸ್ಟೇಬಲ್ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಗರದ ಜಿಮ್ಸ್ ಆಸ್ಪತ್ರೆಯ ಕೋವಿಡ್ ವಾರ್ಡ್ನಲ್ಲಿ ನಡೆದಿದೆ.
ಆನಂದ್ ಪ್ರಸಾದ್ ಹೃದಯಾಘಾತದಿಂದ ಮೃತಪಟ್ಟ ಹೆಡ್ ಕಾನ್ಸ್ಟೇಬಲ್. ನಿಮೋನಿಯಾದಿಂದ ಬಳಲುತ್ತಿದ್ದ ಇವರಿಗೆ ಕೋವಿಡ್ ಸೋಂಕು ತಗುಲಿರುವ ಶಂಕೆ ಹಿನ್ನೆಲೆ ಕೋವಿಡ್ ವಾರ್ಡ್ನಲ್ಲಿ ಚಿಕಿತ್ಸೆ ನೀಡಲಾಗ್ತಿತ್ತು. ಇದೇ ವಾರ್ಡ್ನಲ್ಲಿ ಎರಡು ದಿನಗಳ ಹಿಂದೆ ಇವರ ಪಕ್ಕದ ಬೆಡ್ನಲ್ಲಿದ್ದ ಕೊರೊನಾ ಸೋಂಕಿತ ನರಳಿ ನರಳಿ ಮೃತಪಟ್ಟಿದ್ದ. ಇದನ್ನು ಕಂಡ ಆನಂದ್ ಪ್ರಸಾದ್ ಆತಂಕಕ್ಕೆ ಒಳಗಾಗಿದ್ದರು. ಕುಟುಂಬಸ್ಥರಿಗೆ ಕರೆ ಮಾಡಿ, ನನಗೂ ಇಂತಹ ಸಾವು ಬರಬಹುದು ಎಂದು ಆತಂಕ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.