ಕಲಬುರಗಿ:ನಮ್ಮದು ದುಡ್ಡಿನ ರಾಜಕೀಯ ಅಲ್ಲ, ಕುಮಾರಸ್ವಾಮಿ ದುಡ್ಡಿನ ರಾಜಕಾರಣ ಮಾಡುತ್ತಾರೆ ಅನ್ನೋದಾದರೆ ಪಂಚರತ್ನ ಯಾತ್ರೆ ದುಡ್ಡಿನಿಂದ ನಡೆಯುತ್ತಿದೆಯಾ? ಒಂದು ವರ್ಷದಿಂದ ಜಲಧಾರೆ, ಪಂಚರತ್ನ ಕಾರ್ಯಕ್ರಮ ಜನರ ಮನದಲ್ಲಿ ನಾಟುವಂತ ಕಾರ್ಯಕ್ರಮ ಮಾಡುತ್ತಿದ್ದಾರೆ. ದುಡ್ಡಿನಿಂದ ಜನರನ್ನ ಕರೆ ತರುತ್ತಿಲ್ಲ ದುಡ್ಡಿನ ರಾಜಕೀಯ ಮಾಡುತ್ತಿಲ್ಲ ಎಂದು ಜೆಡಿಎಸ್ ವರಿಷ್ಠರಾದ ಮಾಜಿ ಪ್ರಧಾನಿ ದೇವೇಗೌಡ ಹೇಳಿದರು.
ನಗರದ ವಿಮಾನ ನಿಲ್ದಾಣದಲ್ಲಿ ಪ್ರತಿಕ್ರಿಸಿದ ಅವರು, ಕಳೆದ ಬಾರಿ 25 ಸಾವಿರ ಕೋಟಿ ಸಾಲ ಮನ್ನಾ ಮಾಡುತ್ತೇನೆ ಅಂತಾ ಹೇಳಿದ್ದರು ಇದೇನು ದುಡ್ಡಿನಿಂದ ಹೇಳಿದ್ರಾ? ಎಂದರು. ಇನ್ನು ಬಿಜೆಪಿಗೆ ರೌಡಿಗಳ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯೆ ನೀಡಲು ಒಪ್ಪದ ಅವರು, ರೌಡಿ ರಾಜಕೀಯ ಬಗ್ಗೆ ನನಗೆ ಕೇಳ ಬೇಡಿ ಬೇರೆಯವರಿಗೆ ಕೇಳಿ ಎಂದು ಹೇಳಿದರು.