ಕಲಬುರಗಿ:ಉತ್ತರಪ್ರದೇಶದ ಹಥ್ರಾಸ್‌ನಲ್ಲಿ ಯುವತಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಖಂಡಿಸಿ ಕಲಬುರಗಿಯಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.
ಹಥ್ರಾಸ್ ಸಾಮೂಹಿಕ ಅತ್ಯಾಚಾರ ಪ್ರಕರಣ, ಆರೋಪಿಗಳಿಗೆ ಗಲ್ಲು ವಿಧಿಸುವಂತೆ ಆಗ್ರಹ - ಉತ್ತರ ಪ್ರದೇಶದ ಹಥ್ರಾಸ್
ಎಐಎಂಎಸ್ಎಸ್, ಎಐಡಿಎಸ್ಒ ಹಾಗೂ ನಯಾ ಸವೇರಾ ಸಂಘಟನೆಯ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಯುಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ..
ಹಥ್ರಾಸ್ ಸಾಮೂಹಿಕ ಅತ್ಯಾಚಾರ ಪ್ರಕರಣ, ಆರೋಪಿಗಳಿಗೆ ಗಲ್ಲು ವಿಧಿಸುವಂತೆ ಆಗ್ರಹ
ಎಐಎಂಎಸ್ಎಸ್, ಎಐಡಿಎಸ್ಒ ಹಾಗೂ ನಯಾ ಸವೇರಾ ಸಂಘಟನೆಯ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಯುಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಯುವತಿಯ ಮೇಲೆ ಅತ್ಯಾಚಾರ ನಡೆಸಿ ಆಕೆಯ ನಾಲಿಗೆ ಕತ್ತರಿಸಿ ಮೂಳೆ ಮುರಿಯುವ ಮೂಲಕ ಅತಿ ಕ್ರೂರವಾಗಿ ವರ್ತಿಸಲಾಗಿದೆ. ಕೊಡಲೇ ಯುಪಿ ಸರ್ಕಾರ ಕಾರ್ಯಪ್ರವೃತವಾಗಿ ಈ ಕೃತ್ಯಕ್ಕೆ ಕಾರಣರಾದವರಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಆಗ್ರಹಿಸಿದರು.