ಕರ್ನಾಟಕ

karnataka

ETV Bharat / state

ಅಂಜನಾದ್ರಿ ಬೆಟ್ಟಕ್ಕೆ ಪ್ರಯಾಣ ಬೆಳೆಸಿದ ಕಲಬುರಗಿಯ ಹನುಮ ಮಾಲಾಧಾರಿಗಳು - etv bharat kannada

ಕಲಬುರಗಿ ಜಿಲ್ಲೆಯಿಂದ ಕೊಪ್ಪಳದ ಕಿಷ್ಕಿಂದೆ ಆನೆಗೊಂದಿ ಅಂಜನಾದ್ರಿ ಪರ್ವತಕ್ಕೆ ನೂರಾರು ಹನುಮ ಮಾಲಾಧಾರಿಗಳು ಪ್ರಯಾಣ ಬೆಳೆಸಿದ್ದಾರೆ.

hanuman-maladhari-traveled-to-anjanadri-hill
ಕಲಬುರಗಿ: ಅಂಜನಾದ್ರಿ ಬೆಟ್ಟಕ್ಕೆ ಪ್ರಯಾಣ ಬೆಳೆಸಿದ ಹನುಮ ಮಾಲಾಧಾರಿಗಳು

By

Published : Dec 4, 2022, 3:31 PM IST

ಕಲಬುರಗಿ:ವಿಶ್ವ ಹಿಂದೂ ಪರಿಷತ್, ಬಜರಂಗದಳದ ಶ್ರೀ ಹನುಮ ಮಾಲಾ ಕಾರ್ಯಕ್ರಮದ ನಿಮಿತ್ತ ಕಲಬುರಗಿ ಜಿಲ್ಲೆಯಿಂದ ಕೊಪ್ಪಳದ ಕಿಷ್ಕಿಂದೆಯ ಆನೆಗೊಂದಿ ಅಂಜನಾದ್ರಿ ಪರ್ವತಕ್ಕೆ ನೂರಾರು ಹನುಮ ಮಾಲಾಧಾರಿಗಳು ಪ್ರಯಾಣ ಬೆಳೆಸಿದ್ದಾರೆ.

ನಗರದ ನೆಹರೂ ಗಂಜ್ ಪ್ರದೇಶದ ಹನುಮ ಮಂದಿರದಲ್ಲಿ ಕ್ರೆಡೆಲ್ ಅಧ್ಯಕ್ಷ ಚಂದು ಪಾಟೀಲ್ ನೇತೃತ್ವದಲ್ಲಿ ಹನುಮಂತ ದೇವರಿಗೆ ರುದ್ರಾಭಿಷೇಕ, ಹೋಮ ಹವನ, ನವಗ್ರಹ ಪೂಜೆಯ ನಂತರ 450 ಜನ ಹನುಮ ಭಕ್ತರು ಮಾಲಾಧಾರಣೆ ಮಾಡಿದರು. ಬಳಿಕ ಗಂಜ್ ಪ್ರದೇಶದಿಂದ 11 ರಾಜಹಂಸ ಡಿಲಕ್ಸ್ ಬಸ್​​ಗಳಿಗೆ ಚಂದು ಪಾಟೀಲ್ ಚಾಲನೆ ನೀಡುವ ಮುಖಾಂತರ ಮಾಲಾಧಾರಿಗಳು ಕೊಪ್ಪಳಕ್ಕೆ ಪ್ರಯಾಣ ಬೆಳೆಸಿದ್ದಾರೆ.

ಅಂಜನಾದ್ರಿ ಬೆಟ್ಟಕ್ಕೆ ಪ್ರಯಾಣ ಬೆಳೆಸಿದ ಹನುಮ ಮಾಲಾಧಾರಿಗಳು

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ವಿಭಾಗದ ಕಾರ್ಯದರ್ಶಿ ಶಿವರಾಜ್ ಸಂಗೋಳಗಿ, ಜಿಲ್ಲಾ ಅಧ್ಯಕ್ಷ ರಾಜು ನವಲದಿ, ಪ್ರಶಾಂತ್ ಗುಡ್ಡಾ, ಅಶ್ವಿನ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಮಾಲಾಧಾರಿಗಳು ಕಲಬುರಗಿಯಿಂದ ಕೊಪ್ಪಳದ ಗವಿ ಸಿದ್ದೇಶ್ವರ ಸಂಸ್ಥಾನಕ್ಕೆ ತೆರಳಿ, ವಿಶ್ರಾಂತಿ ಪಡೆದು ಬೆಳಗ್ಗೆ ಪೂಜೆಯ ನಂತರ ಕಿಷ್ಕಿಂದೆ ಅಂಜನಾದ್ರಿ ಬೆಟ್ಟಕ್ಕೆ ತಲುಪಲಿದ್ದಾರೆ.

ಇದನ್ನೂ ಓದಿ:ಇಂದು ಸಂಜೆ ರಾಜಸ್ಥಾನ ಪ್ರವೇಶಿಸಲಿರುವ ಭಾರತ್ ಜೋಡೋ ಯಾತ್ರೆ

ABOUT THE AUTHOR

...view details