ಕಲಬುರಗಿ:ಜಿಲ್ಲೆಯ ಇಸ್ಲಾಂ ಬಾಂಧವರ ಪ್ರಮುಖ ಉರುಸ್ಗಳಲ್ಲಿ ಒಂದಾದ ವಾಡಿ ಪಟ್ಟಣ ಸಮೀಪದ ಹಳಕರ್ಟಿ ದರ್ಗಾ ಶರೀಫ್ ಉರುಸ್ ಸಂಧಲ್ ಮೆರವಣಿಗೆ ಅದ್ಧೂರಿಯಾಗಿ ಜರುಗಿತು.
ಹಳಕರ್ಟಿ ದರ್ಗಾ ಶರೀಫ್ ಉರುಸ್ ಸಂಧಲ್ ಅದ್ಧೂರಿ ಮೆರವಣಿಗೆ
ಕಲಬುರಗಿ ಜಿಲ್ಲೆಯ ವಾಡಿ ಪಟ್ಟಣ ಸಮೀಪದ ಹಳಕರ್ಟಿ ದರ್ಗಾ ಶರೀಫ್ ಉರುಸ್ ಸಂಧಲ್ ಮೆರವಣಿಗೆಯು ಅದ್ಧೂರಿಯಾಗಿ ನಡೆಯಿತು.
ದರ್ಗಾದ ಪೀಠಾಧಿಪತಿ ಸೈಯದ್ ಅಬ್ಬು ಖ್ವಾದ್ರಿ ಅವರ ನೇತೃತ್ವದಲ್ಲಿ ಹೈದರಾಬಾದ್ನಿಂದ ವಿಶೇಷ ರೈಲಿನ ಮೂಲಕ ಆಗಮಿಸಿದ ಸಂಧಲ್ ಮೆರವಣಿಗೆಯು ವಾಡಿ ಪಟ್ಟದ ರೈಲ್ವೆ ನಿಲ್ದಾಣದಿಂದ ಹಳಕರ್ಟಿ ಗ್ರಾಮದ ಶರೀಫ್ ದರ್ಗಾವರೆಗೂ ಅದ್ಧೂರಿಯಾಗಿ ನಡೆಯಿತು. ಸೈಯದ್ ಮೊಹಮ್ಮದ್ ಬಾದಶಹಾ ಆಸ್ತಾನ್-ಈ-ಖ್ವಾದ್ರಿ ಚಿಸ್ತಿ ಅವರ 42ನೇ ವರ್ಷದ ಉರುಸ್ ಇದಾಗಿದ್ದು, ಎರಡು ದಿನಗಳವರೆಗೆ ಉರುಸ್ ನಡೆಯುತ್ತದೆ.
ರಾಜ್ಯ ಮಾತ್ರವಲ್ಲದೆ ಹೊರರಾಜ್ಯದದಿಂದಲೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಉರುಸ್ನಲ್ಲಿ ಭಾಗವಹಿಸುತ್ತಾರೆ. ಸತತ ಎರಡು ದಿನಗಳವರೆಗೆ ದರ್ಗಾದಲ್ಲಿ ಖವ್ವಾಲಿ ಗಾಯನ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ನೆರವೇರುತ್ತವೆ. ದರ್ಗಾದಲ್ಲಿ ಖವ್ವಾಲಿ ಸ್ಪರ್ಧೆ ಏರ್ಪಟ್ಟಿದ್ದು ಹಲವು ಕಡೆಗಳಿಂದ ಖ್ಯಾತ ಖವ್ವಾಲಿ ಗಾಯಕರು ಆಗಮಿಸಿ ಖವ್ವಾಲಿ ಗಾಯನ ಮಾಡುವರು.