ಕಲಬುರಗಿ: ಸಚಿವ ಕೆ ಎಸ್ ಈಶ್ವರಪ್ಪ ಅವರದ್ದು ಹರಿದ ಬಾಯಿ, ಅವರಿಗೆ ಮದ ಬಂದಿದೆ ಅದಕ್ಕೆ ಇಂಥಹ ಹೇಳಿಕೆ ನೀಡಿದ್ದಾರೆ ಎಂದು ಮಾಜಿ ಸಚಿವ ಹೆಚ್ ಎಂ ರೇವಣ್ಣ ವಾಗ್ದಾಳಿ ನಡೆಸಿದರು.
ಈಶ್ವರಪ್ಪ ಅವರದ್ದು ಹರಿದ ಬಾಯಿ, ಅವರಿಗೆ ಮದ ಬಂದಿದೆ: ಹೆಚ್.ಎಂ. ರೇವಣ್ಣ ವಾಗ್ದಾಳಿ ನಗರದಲ್ಲಿಂದು ಮಾತನಾಡಿದ ರೇವಣ್ಣ, ಬಿಜೆಪಿಯವರು ರೈತರ ಬಗ್ಗೆ ಮಾತಾಡೋದಿಲ್ಲ, ಹೋರಾಟ ಮಾಡಿದ್ದು ನೋಡಿಲ್ಲ. ಭಾವನಾತ್ಮಕ ವಿಚಾರದ ಮೇಲೆ ಬಿಜೆಪಿಯವರು ರಾಜಕೀಯ ಮಾಡ್ತಾರೆ. ಈಶ್ವರಪ್ಪ ಉಪ ಮುಖ್ಯಮಂತ್ರಿ ಆಗಿದ್ದಾಗ ರಾಜ್ಯದಲ್ಲಿ ಅತೀ ಹೆಚ್ಚು ಅತ್ಯಾಚಾರ ಪ್ರಕರಣಗಳು ನಡೆದಿದ್ದವು. ಆಗ ಏನ್ ಮಾತಾಡಿದ್ರು ನಡೆಯುತ್ತೆ ಅಂತಾ ಈಶ್ವರಪ್ಪ ನಾಲಿಗೆ ಹರಿಬಿಟ್ಟಿದ್ದರು ಎಂದು ಕಿಡಿಕಾರಿದರು.
ಹಿಜಾಬ್ ವಿಷಯ ಈಗಾಗಲೇ ಕೋರ್ಟ್‌ನಲ್ಲಿ ಇರುವುದರಿಂದ ಹೆಚ್ಚಿಗೆ ಮಾತಾಡೋದಿಲ್ಲ. ಅವರವರ ಧರ್ಮ ಆಚರಣೆ ಅವರಿಗೆ ಬಿಟ್ಟಿದ್ದು. ಆದ್ರೆ ಶಾಸಕ ರಘುಪತಿ ಭಟ್ ಅವರಿಗೆ ಆ ಭಾಗದಲ್ಲಿ ವರ್ಚಸ್ಸು ಕಡಿಮೆ ಆಗ್ತಿರೋದ್ರಿಂದ ಈ ವಿಚಾರ ಬಂತೆನೋ ಅನ್ನೋದು ನನಗೆ ಅನಿಸಿದೆ ಎಂದರು.
ಶಿವಮೊಗ್ಗದಲ್ಲಿ ನಡೆದ ಹರ್ಷ ಹತ್ಯೆ ಪ್ರಕರಣ ವಿಚಾರವಾಗಿ ಮಾತನಾಡಿದ ರೇವಣ್ಣ, ಶಿವಮೊಗ್ಗದಲ್ಲಿ ನಡೆದಿರೋದು ಏನಾಗಿದೆ ಅಂತಾ ನಾನು ಕಲಬುರಗಿಯಿಂದ ಹೇಳಲು ಆಗೋದಿಲ್ಲ. ಆದ್ರೆ ಈ ರೀತಿಯ ಘಟನೆ ನಡೆಯಬಾರದು. ಯಾವ ಕಾರಣಕ್ಕಾಗಿ ಈ ಘಟನೆ ನಡೆದಿದೆ ಅನ್ನೋದರ ಬಗ್ಗೆ ತನಿಖೆ ಆಗಲಿ. ಭಜರಂಗದಳ ಆಗಲಿ, ಯೂತ್ ಕಾಂಗ್ರೆಸ್ ಆಗಲಿ ಯಾರು ಇದರಲ್ಲಿ ತಲೆ ಹಾಕಬಾರದು. ರಾಜ್ಯದಲ್ಲಿ ನೆಮ್ಮದಿ ನೆಲೆಸಬೇಕು, ಎಲ್ಲರೂ ಸಾಮರಸ್ಯದಿಂದ ಬದುಕಬೇಕೆಂದು ಹೇಳಿದರು.
ಇದನ್ನೂ ಓದಿ:ಶಿವಮೊಗ್ಗ ಯುವಕ ಹರ್ಷ ಕೊಲೆ ಬಗ್ಗೆ ಗೃಹ ಸಚಿವರ ವರದಿ ಕುರಿತು ನಾಳೆ ಮಾಹಿತಿ: ಸಿಎಂ