ಕಲಬುರಗಿ: ಗಾಳಿಯಲ್ಲಿ ಗುಂಡು ಹಾರಿಸಿ ಬನ್ನಿ ಮುಡಿದ ವಿಶ್ವ ಹಿಂದೂ ಪರಿಷತ್ ಮುಖಂಡ ಲಿಂಗರಾಜಪ್ಪ ಅಪ್ಪ ಅವರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ.
ಆಯುಧ ಪೂಜೆ ದಿನದಂದು ಲಿಂಗರಾಜಪ್ಪ ಅಪ್ಪ ಒಂದು ಬಂದೂಕು ಹಾಗೂ ಒಂದು ಪಿಸ್ತೂಲ್ ಮೂಲಕ ಸುಮಾರು 8 ಬಾರಿ ಗಾಳಿಯಲ್ಲಿ ಗುಂಡು ಹಾರಿಸಿದ ವಿಡಿಯೋ ವೈರಲ್ ಆಗಿತ್ತು. ಈ ಕುರಿತು ಸಾಕಷ್ಟು ಪರ ವಿರೋಧ ಚರ್ಚೆಗಳ ನಡುವೆ ಇದೀಗ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.