ಕರ್ನಾಟಕ

karnataka

ETV Bharat / state

ವೀರಯೋಧರಿಗೆ ಅದ್ದೂರಿ ಸ್ವಾಗತ ಕೋರಿದ ಸ್ವಗ್ರಾಮದ ಜನ.. - Grand welcome to soldiers in Kalaburgi

ಭಾರತೀಯ ಗಡಿ ಭದ್ರತಾ ಪಡೆ, ಭಾರತೀಯ ಸೇನೆಯಲ್ಲಿ ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಗುಜರಾತ್, ಪಂಜಾಬ್ ಗಡಿ ಸೇರಿ ದೇಶದ ಹಲವು ಗಡಿಗಳಲ್ಲಿ ಇವರು ಸೇವೆ ಸಲ್ಲಿಸಿದ್ದಾರೆ. ದೇಶ ಸೇವೆ ಮಾಡಬೇಕೆಂಬ ಇಚ್ಛೆಯಿಂದ ಒಂದೇ ಗ್ರಾಮದ ಮೂವರು ಯೋಧರು ಸೇನೆಗೆ ಸೇರಿದ್ದರು. ಇದೀಗ ಸುದೀರ್ಘ ಸೇವೆ ಸಲ್ಲಿಸಿ ಹುಟ್ಟೂರಿಗೆ ಆಗಮಿಸಿದ್ದಾರೆ..

Grand welcome to soldier in Kalaburgi news
ವೀರಯೋಧರಿಗೆ ಅದ್ಧೂರಿ ಸ್ವಾಗತ ಕೋರಿದ ಸ್ವಗ್ರಾಮದ ಜನ

By

Published : Aug 13, 2021, 2:55 PM IST

Updated : Aug 13, 2021, 3:43 PM IST

ಕಲಬುರಗಿ :ದೇಶದ ಗಡಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಇಂದು ಸ್ವಗ್ರಾಮಕ್ಕೆ ಮರಳಿದ ಯೋಧರಿಗೆ ಗ್ರಾಮಸ್ಥರು ಅದ್ದೂರಿ ಸ್ವಾಗತ ಕೋರಿದರು. ದೇಶ ಸೇವೆ ಮಾಡಿ ಮರಳಿ ಊರಿಗೆ ಆಗಮಿಸಿದ್ದ ಯೋಧರಿಗೆ ಗ್ರಾಮಸ್ಥರು ಜಯಘೋಷಗಳೊಂದಿಗೆ ಸ್ವಾಗತಿಸಿದರು. ಗ್ರಾಮದಲ್ಲಿ ಭವ್ಯ ಮೆರವಣಿಗೆ ಮಾಡಿ, ಮಹಿಳೆಯರು ತಿಲಕ ಇಟ್ಟು ಆರತಿ ಬೆಳಗಿ ವೀರಯೋಧರನ್ನು ಸ್ವಾಗತಿಸಿದರು.

ವೀರಯೋಧರಿಗೆ ಅದ್ದೂರಿ ಸ್ವಾಗತ ಕೋರಿದ ಸ್ವಗ್ರಾಮದ ಜನ

ಭಾರತೀಯ ಸೇನೆ ಹಾಗೂ ಬಿಎಸ್‌ಎಫ್‌ನಲ್ಲಿ 20 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಮರತೂರು ಗ್ರಾಮದ ಶರಣಪ್ಪ ದುಗ್ಗೊಂಡ, ಜಗದೀಶ್ ಠಾಕೂರ್ ಮತ್ತು ಶಿವಾನಂದ ಧರ್ಮಾಪುರ ಅವರನ್ನ ಇಂದು ಗ್ರಾಮದ ಅಂಬೇಡ್ಕರ್ ವೃತ್ತದಿಂದ ತೆರೆದ ಜೀಪಿನಲ್ಲಿ ಮೆರವಣಿಗೆ ಮಾಡಿ, ಜಯಘೋಷ ಹಾಕಿ ಅದ್ದೂರಿಯಾಗಿ ಸ್ವಾಗತಿಸಲಾಯ್ತು.

ಭಾರತೀಯ ಗಡಿ ಭದ್ರತಾ ಪಡೆ, ಭಾರತೀಯ ಸೇನೆಯಲ್ಲಿ ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಗುಜರಾತ್, ಪಂಜಾಬ್ ಗಡಿ ಸೇರಿ ದೇಶದ ಹಲವು ಗಡಿಗಳಲ್ಲಿ ಇವರು ಸೇವೆ ಸಲ್ಲಿಸಿದ್ದಾರೆ. ದೇಶ ಸೇವೆ ಮಾಡಬೇಕೆಂಬ ಇಚ್ಛೆಯಿಂದ ಒಂದೇ ಗ್ರಾಮದ ಮೂವರು ಯೋಧರು ಸೇನೆಗೆ ಸೇರಿದ್ದರು. ಇದೀಗ ಸುದೀರ್ಘ ಸೇವೆ ಸಲ್ಲಿಸಿ ಹುಟ್ಟೂರಿಗೆ ಆಗಮಿಸಿದ್ದಾರೆ.

ಓದಿ:ಮಂಗಳೂರಿನಲ್ಲಿ ಎನ್ಐಎ ಕಚೇರಿ ಆರಂಭ?: ಸುಳಿವು ನೀಡಿದ ಸಿಎಂ ಬೊಮ್ಮಾಯಿ

Last Updated : Aug 13, 2021, 3:43 PM IST

ABOUT THE AUTHOR

...view details