ಕಲಬುರಗಿ:ಕ್ಷುಲ್ಲಕ ಕಾರಣಕ್ಕೆ ಪಿಡಿಒ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಗ್ರಾಮ ಪಂಚಾಯಿತಿ ಸದಸ್ಯರೋರ್ವರು ಆರೋಪ ಮಾಡಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ಗ್ರಾಪಂ ಸದಸ್ಯನ ಮೇಲೆ ಪಿಡಿಒ ಹಲ್ಲೆ ಆರೋಪ ಜಿಲ್ಲೆಯ ಆಳಂದ ತಾಲೂಕಿನ ಪಡಸಾವಳಗಿ ಗ್ರಾಮ ಪಂಚಾಯಿತಿ ಸದಸ್ಯ ವಿಶ್ವನಾಥ್ ಜಮಾದಾರ, ತಮ್ಮ ವಾರ್ಡ್ಗೆ ನೀರು ಪೂರೈಕೆ ವ್ಯವಸ್ಥೆ ಕಲ್ಪಿಸಬೇಕೆಂದು ಮನವಿ ಮಾಡಿಕೊಂಡಿದ್ದರಂತೆ. ಆದರೆ ಪಂಚಾಯಿತಿಯಲ್ಲಿ ಅಕ್ರಮ ಆರೋಪ ಮಾಡಿದ ದ್ವೇಷದ ಕಾರಣ ಪಿಡಿಒ ದಶರಥ ಪಾತ್ರೆ ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಬೊಲೆರೋ ವಾಹನದಲ್ಲಿ ತನ್ನ ಸಹಚರರೊಂದಿಗೆ ಬಂದ ಪಿಡಿಒ, ತನ್ನ ಮೇಲೆ ರಾಡು, ಬಡಿಗೆಗಳಿಂದ ಹಲ್ಲೆ ಮಾಡಿದ್ದಾರೆ. ಬಳಿಕ ಜಾತಿ ನಿಂದನೆ ಮಾಡಿರೋವುದಾಗಿ ತನ್ನ ಮೇಲೆ ಸುಳ್ಳು ದೂರು ನೀಡಿದ್ದಾನೆ ಎಂದು ದೂರಿದರು.
ಈ ಸಂಬಂಧ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ ಪಿಡಿಒ ಮತ್ತು ಸಹಚರರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಜಮಾದಾರ ಆಗ್ರಹಿಸಿದ್ದಾರೆ.