ಕಲಬುರಗಿ:ಗ್ರಾಮ ಪಂಚಾಯಿತಿ ಚುನಾವಣೆ ಹತ್ತಿರ ಬರುತ್ತಿದ್ದು, ಅದರ ಸದಸ್ಯತ್ವ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡುವ ಸಲುವಾಗಿ ಹರಾಜು ಹಾಕಿದ ಘಟನೆ ಜಿಲ್ಲೆಯ ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಗ್ರಾಮಸ್ಥರಿಂದಲೇ ಸದಸ್ಯತ್ವವನ್ನು ಅವಿರೋಧ ಆಯ್ಕೆಗೆ ಹರಾಜು ಹಾಕಿದ್ದಾರೆ ಎನ್ನಲಾಗಿದೆ. ಮೂರು ದಿನದ ಹಿಂದೆ ಗ್ರಾಮದಲ್ಲಿ ಹರಾಜು ಹಾಕಿದ್ದು, ವಾರ್ಡ್ ನಂಬರ್ 1ರ ನಾಲ್ಕು ಸ್ಥಾನಗಳಿಗೆ ಹರಾಜು ಹಾಕಿದ್ದಾರೆ. ನಾಲ್ಕು ಸ್ಥಾನಗಳನ್ನು 26.55 ಲಕ್ಷಕ್ಕೆ ಹರಾಜು ಹಾಕಲಾಗಿದೆ. ಪ್ರತಿ ಮೆಂಬರ್ಗೆ ಎರಡೂವರೆ ಕೋಟಿ ಅನುದಾನವಿದೆ ಅಂತಾ ಕೂಗಿ ಕೂಗಿ ಹರಾಜು ಹಾಕಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ಸದ್ದು ಮಾಡುತ್ತಿದೆ.