ಕರ್ನಾಟಕ

karnataka

ETV Bharat / state

ಉದ್ದೇಶಪೂರ್ವಕವಾಗಿ ಸರ್ಕಾರ ತೊಗರಿ ಖರೀದಿ ಮಾಡುತ್ತಿಲ್ಲ: ಮಾರುತಿ ಮಾನ್ಪಡೆ - ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಾರುತಿ ಮಾನ್ಪಡೆ

ಮಾರುಕಟ್ಟೆಯಲ್ಲಿ ತೊಗರಿ ದರ ಕುಸಿಯುತ್ತಿದ್ದರೂ ತೊಗರಿ ಕೇಂದ್ರ ಸ್ಥಾಪಿಸದೇ ಬೇಜವಾಬ್ದಾರಿತನ ಅನುಸರಿಸುತ್ತಿದೆ ಎಂದು ಸರ್ಕಾರದ ವಿರುದ್ಧ ಮಾರುತಿ ಮಾನ್ಪಡೆ ಆರೋಪ ಮಾಡಿದ್ದಾರೆ.

ಮಾರುತಿ ಮಾನ್ಪಡೆ , Maruthi Manpade
ಮಾರುತಿ ಮಾನ್ಪಡೆ

By

Published : Jan 15, 2020, 7:59 PM IST

ಕಲಬುರಗಿ: ರಾಜ್ಯ ಸರ್ಕಾರ ತೊಗರಿ ಖರೀದಿ ಪ್ರಕ್ರಿಯೆ ಆರಂಭಿಸುತ್ತಿಲ್ಲ. ಉದ್ದೇಶಪೂರ್ವಕವಾಗಿ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಾರುತಿ ಮಾನ್ಪಡೆ ಆರೋಪಿಸಿದ್ದಾರೆ.

ರಾಜ್ಯ ಸರ್ಕಾರ ತೊಗರಿ ಕೇಂದ್ರ ಸ್ಥಾಪನೆಯಲ್ಲಿ ವಿನಾಕಾರಣ ಮಿನಾಮೇಷ ಎಣಿಸುತ್ತಿದೆ. ಮಾರುಕಟ್ಟೆಯಲ್ಲಿ ತೊಗರಿ ದರ ಕುಸಿಯುತ್ತಿದ್ದರೂ ತೊಗರಿ ಕೇಂದ್ರ ಸ್ಥಾಪಿಸದೇ ಬೇಜವಾಬ್ದಾರಿತನ ಅನುಸರಿಸುತ್ತಿದೆ. ಪಟ್ಟಭದ್ರ ಹಿತಾಸಕ್ತಿಗಳ ಒತ್ತಡಕ್ಕೆ ಮಣಿದು ತೊಗರಿ ಖರೀದಿ ವಿಳಂಬ ಮಾಡುತ್ತಿದೆ ಎಂದು ಕಿಡಿಕಾರಿದರು.

ಹಾಗಾಗಿ ಕೂಡಲೇ ತೊಗರಿ ಕೇಂದ್ರ ಪ್ರಕ್ರಿಯೆ ಪ್ರಾರಂಭಿಸಬೇಕು ಹಾಗೂ ರೈತರ ಪ್ರೋತ್ಸಾಹ ಧನ ಹೆಚ್ಚಿಸಬೇಕು. 10 ಕ್ವಿಂಟಲ್ ತೊಗರಿ ಖರೀದಿ ಮಿತಿಯನ್ನು ಕನಿಷ್ಠ 25 ಕ್ವಿಂಟಲ್ ಹೆಚ್ಚಳಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ABOUT THE AUTHOR

...view details