ಕರ್ನಾಟಕ

karnataka

ETV Bharat / state

ಕಾಗಿಣಾ ಏತ ನೀರಾವರಿ ಯೋಜನೆಗೆ ಸರ್ಕಾರ ಅಸ್ತು.. ಶಾಸಕ ತೇಲ್ಕೂರ ಸ್ಪಷ್ಟನೆ - Kagina irrigation project

ಕಾಗಿಣಾ ನದಿಗೆ ನಿಗದಿಯಾಗಿರೋ 2 ಟಿಎಂಸಿ ನೀರು ಬಳಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. 47 ಗ್ರಾಮಗಳ 25 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸೋ ಗುರಿ ಹೊಂದಲಾಗಿದೆ..

Government approves Kagina irrigation project
ಕಾಗಿಣಾ ಏತ ನೀರಾವರಿ ಯೋಜನೆಗೆ ಸರ್ಕಾರ ಅಸ್ತು

By

Published : Dec 20, 2020, 11:40 AM IST

ಕಲಬುರಗಿ :ಜಿಲ್ಲೆಯ ಸೇಡಂ ತಾಲೂಕಿನ ಕಾಗಿಣಾ ನದಿ ವ್ಯಾಪ್ತಿಯಲ್ಲಿ ಎರಡು ಏತ ನೀರಾವರಿ ಯೋಜನೆ ಸ್ಥಾಪನೆಗೆ ಕರ್ನಾಟಕ ನೀರಾವರಿ ನಿಗಮ ತಾತ್ವಿಕ ಒಪ್ಪಿಗೆ ನೀಡಿದೆ ಎಂದು ಸೇಡಂ ಶಾಸಕ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ರಾಜಕುಮಾರ ಪಾಟೀಲ ತೇಲ್ಕೂರ ತಿಳಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಒಟ್ಟು 639 ಕೋಟಿ ರೂಪಾಯಿಗಳ ಯೋಜನೆ ಇದಾಗಿದೆ. ಈ ವರ್ಷಕ್ಕೆ 143 ಕೋಟಿ ರೂಪಾಯಿ ಯೋಜನೆಗೆ ತಾತ್ವಿಕ ಒಪ್ಪಿಗೆ ಸಿಕ್ಕಿದೆ. ಯಡ್ಡಳ್ಳಿ ಹಾಗೂ ತರನಳ್ಳಿ ಬಳಿ ಎರಡು ಏತ ನೀರಾವರಿ ಯೋಜನೆ ಸ್ಥಾಪನೆ ಮಾಡಲಾಗುತ್ತಿದೆ.

ಕಾಗಿಣಾ ನದಿಗೆ ನಿಗದಿಯಾಗಿರೋ 2 ಟಿಎಂಸಿ ನೀರು ಬಳಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. 47 ಗ್ರಾಮಗಳ 25 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸೋ ಗುರಿ ಹೊಂದಲಾಗಿದೆ ಎಂದರು.

55 ಹಳ್ಳಿಗಳು ಸೇರಿದಂತೆ ಸೇಡಂ ಪಟ್ಟಣಕ್ಕೂ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸೋ ಗುರಿ ಹೊಂದಲಾಗಿದೆ. ಕುಮುದ್ವತಿ ನದಿ ಪುನರುಜ್ಜೀವನಕ್ಕೆ ₹203 ಕೋಟಿ ಯೋಜನೆ ರೂಪಿಸಲಾಗಿದೆ.

ಕಾಗಿಣಾ ಹಾಗೂ ಕುಮುದ್ವತಿ ನದಿಗಳ ವ್ಯಾಪ್ತಿಯ ಯೋಜನೆಗಳಿಗೆ ಕರ್ನಾಟಕ ನೀರಾವರಿ ನಿಗಮ ತಾತ್ವಿಕ ಒಪ್ಪಿಗೆ ಸಿಕ್ಕಿದ್ದು, ಮೂರು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.

ಇದನ್ನು ಓದಿ :ಸುಳ್ಳು ಆರೋಪ ಮಾಡಿದ್ರೆ ಮಾನನಷ್ಟ ಮೊಕದ್ದಮೆ : ಕಾಶಪ್ಪನವರ್​ಗೆ ದೊಡ್ಡನಗೌಡ ಪಾಟೀಲ ಎಚ್ಚರಿಕೆ

ABOUT THE AUTHOR

...view details