ಕಲಬುರಗಿ:ಕೊರೊನಾ ಹರಡುವಿಕೆಯ ಹಿನ್ನೆಲೆ ಕಲಬುರಗಿಯಲ್ಲಿ ಲಾಕ್ಡೌನ್ ಮುಂದುವರಿದಿದೆ. ಕಲಬುರಗಿ ನಗರ ಮತ್ತು ಜಿಲ್ಲೆಯ ಇತರೆಡೆ ನಿನ್ನೆ ಬೆಳಗ್ಗೆಯಿಂದಲೇ ಲಾಕ್ಡೌನ್ ಆರಂಭಗೊಂಡಿದೆ.
ಕಲಬುರಗಿಯಲ್ಲಿ ಲಾಕ್ಡೌನ್ಗೆ ಉತ್ತಮ ಸ್ಪಂದನೆ...ರಸ್ತೆಗಿಳಿಯಲು ಜನರ ಹಿಂದೇಟು ಆದರೆ ನಿನ್ನೆ ಆರಂಭಗೊಂಡಿದ್ದ ಲಾಕ್ಡೌನ್ಗೆ ಉತ್ತಮ ಪ್ರತಿಕ್ರಿಯೆ ದೊರಕದೆ, ಕಾಟಾಚಾರಕ್ಕೆ ಲಾಕ್ಡೌನ್ ಮಾಡಲಾಗಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಇಂದು ಜನತೆ ರಸ್ತೆಗಳಿಯದೆ ಲಾಕ್ಡೌನ್ ಯಶಸ್ವಿಯತ್ತ ಸಾಗಿದೆ.
ರಾತ್ರಿಯಿಂದ ಸತತವಾಗಿ ಜಿಟಿ ಜಿಟಿ ಮಳೆ ಇರೋದ್ರಿಂದ ವಾಹನ ಸಂಚಾರ ವಿರಳವಾಗಿದೆ. ಜಿಲ್ಲಾಡಳಿತ ದಿಢೀರಾಗಿ ಲಾಕ್ಡೌನ್ ಘೋಷಿಸಿದ್ದರಿಂದ ನಿನ್ನೆ ಜನತೆಯಲ್ಲಿ ಗೊಂದಲ ಉಂಟಾಗಿತ್ತು. ಇಂದಿನಿಂದ ಕಟ್ಟುನಿಟ್ಟಾಗಿ ಲಾಕ್ಡೌನ್ ಜಾರಿಗೆ ಜಿಲ್ಲಾಡಳಿತ ಮುಂದಾಗಿದೆ.
ಗ್ರಾಮೀಣ ಪ್ರದೇಶ ಹೊರತುಪಡಿಸಿ ಜುಲೈ 20ರ ವರೆಗೂ ನಗರ ಮತ್ತು ಜಿಲ್ಲೆಯ ಇತರ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಲಾಕ್ಡೌನ್ ಮುಂದುವರಿಯಲಿದ್ದು, ತುರ್ತು ಮತ್ತು ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.