ಕರ್ನಾಟಕ

karnataka

ETV Bharat / state

ಸಿಪಿಐ ಶ್ರೀಮಂತ ಇಲ್ಲಾಳಗೆ ಗುಣಮಟ್ಟದ ಚಿಕಿತ್ಸೆ ನೀಡಿ.. ಕುರುಬ ಸಮುದಾಯದಿಂದ ಪ್ರತಿಭಟನೆ - ಶ್ರೀಮಂತ ಇಲ್ಲಾಳಗೆ ಗುಣಮಟ್ಟದ ಚಿಕಿತ್ಸೆ

ಶ್ರೀಮಂತ ಇಲ್ಲಾಳ ಅವರಿಗೆ ಏರ್ ಲಿಫ್ಟ್ ಮುಖಾಂತರ ಬೆಂಗಳೂರಿಗೆ ಕರೆದೊಯ್ದು ಗುಣಮಟ್ಟದ ಚಿಕಿತ್ಸೆ ನೀಡಬೇಕು. ಅವರ ಮೇಲೆ ಹಲ್ಲೆ ಮಾಡಿದ ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಎಂದು‌ ಕುರುಬ ಸಮುದಾಯ ಆಗ್ರಹಿಸಿದೆ.

Kuruba community protest
ಕುರುಬ ಸಮುದಾಯ ಪ್ರತಿಭಟನೆ

By

Published : Sep 24, 2022, 4:33 PM IST

Updated : Sep 24, 2022, 5:50 PM IST

ಕಲಬುರಗಿ: ಗಾಂಜಾ ದಂಧೆಕೋರರಿಂದ ಹಲ್ಲೆಗೆ ಒಳಗಾಗಿ ಚಿಂತಾಜನಕ‌ ಸ್ಥಿತಿಯಲ್ಲಿರುವ ಸಿಪಿಐ ಶ್ರೀಮಂತ ಇಲ್ಲಾಳ ಪರವಾಗಿ ಜಿಲ್ಲಾ‌ ಕುರುಬ ಸಮುದಾಯ ಪ್ರತಿಭಟನೆ ನಡೆಸಿ ಜಿಲ್ಲಾಢಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶ್ರೀಮಂತ ಇಲ್ಲಾಳ ಅವರಿಗೆ ಚಿಕಿತ್ಸೆ ನೀಡಲಾಗುತ್ತಿರುವ ಯುನೈಟೆಡ್ ಆಸ್ಪತ್ರೆ ಮುಂಭಾಗದ‌ ರಸ್ತೆ ಮೇಲೆ ಕುಳಿತು ಪ್ರತಿಭಟನೆ ನಡೆಸಿ ಗಾಂಜಾ ಮಾಫಿಯಾಕ್ಕೆ ಧಿಕ್ಕಾರ ಕೂಗಿದರು. ಶ್ರೀಮಂತ ಇಲ್ಲಾಳ ಅವರಿಗೆ ಏರ್ ಲಿಫ್ಟ್ ಮುಖಾಂತರ ಬೆಂಗಳೂರಿಗೆ ಕರೆದೊಯ್ದು ಗುಣಮಟ್ಟದ ಚಿಕಿತ್ಸೆ ನೀಡಬೇಕು. ಅವರ ಮೇಲೆ ಹಲ್ಲೆ ಮಾಡಿದ ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಎಂದು‌ ಆಗ್ರಹಿಸಿದರು.

ಕುರುಬ ಸಮುದಾಯ ಪ್ರತಿಭಟನೆ

ಅಪಾಯದ ಸಾಧ್ಯತೆಗಳು ಗೊತ್ತಿದ್ದರೂ ಯಾವುದೇ ಪೂರ್ವ ನಿಯೋಜಿತ ಪ್ಲ್ಯಾನ್ ಮಾಡಿಕೊಳ್ಳದೆ ಅವರನ್ನು ಅಪಾಯಕ್ಕೆ ದೂಡಲಾಗಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿ, ಎಸ್​ಪಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತ‌ಪಡಿಸಿದರು.

ಇದನ್ನೂ ಓದಿ:ಪೊಲೀಸರ ಮೇಲೆ ಗಾಂಜಾ ದಂಧೆಕೋರರ ಅಟ್ಟಹಾಸ: ಕಲಬುರಗಿ ಸರ್ಕಲ್ ಇನ್ಸ್​ಪೆಕ್ಟರ್​​ ಸ್ಥಿತಿ ಚಿಂತಾಜನಕ

Last Updated : Sep 24, 2022, 5:50 PM IST

ABOUT THE AUTHOR

...view details