ಕಲಬುರಗಿ:ಮಾಜಿ ಸಚಿವ, ಕೋಲಿ ಸಮಾಜದ ಮುಖಂಡ ಬಾಬುರಾವ್ ಚಿಂಚನಸೂರ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಹೈದರಾಬಾದ್ ಕರ್ನಾಟಕ ಕೋಲಿ ಸಮಾಜ ಜಾಗೃತಿ ಸಂಘಟನೆ ಆಗ್ರಹಿಸಿದೆ.
ಬಾಬುರಾವ್ ಚಿಂಚನಸೂರಗೆ ಸಚಿವ ಸ್ಥಾನ ನೀಡಬೇಕು: ಶಾಂತಪ್ಪ ಕೋಡ್ಲಿ - ಅಧ್ಯಕ್ಷ ಶಾಂತಪ್ಪ ಕೋಡ್ಲಿ
ಬಾಬುರಾವ್ ಚಿಂಚನಸೂರ ಅವರಿಗೆ ಬಿಜೆಪಿ ಮುಖಂಡರು ಸೂಕ್ತ ಸ್ಥಾನಮಾನ ನೀಡಬೇಕೆಂದು ಹೈದರಾಬಾದ್ ಕರ್ನಾಟಕ ಕೋಲಿ ಸಮಾಜ ಜಾಗೃತಿ ಸಂಘಟನೆ ಒತ್ತಾಯಿಸಿದೆ.
![ಬಾಬುರಾವ್ ಚಿಂಚನಸೂರಗೆ ಸಚಿವ ಸ್ಥಾನ ನೀಡಬೇಕು: ಶಾಂತಪ್ಪ ಕೋಡ್ಲಿ](https://etvbharatimages.akamaized.net/etvbharat/prod-images/768-512-4166375-thumbnail-3x2-klb.jpg)
ಶಾಂತಪ್ಪ ಕೋಡ್ಲಿ
ಕಲಬುರಗಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಶಾಂತಪ್ಪ ಕೋಡ್ಲಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ಚಿಂಚನಸೂರ ಪ್ರಯತ್ನದಿಂದಾಗಿ ಸೋಲರಿಯದ ಸರದಾರ ಮಲ್ಲಿಕಾರ್ಜುನ ಖರ್ಗೆಗೆ ಸೋಲುಣಿಸಲು ಸಾಧ್ಯವಾಯಿತು. ಆದ್ದರಿಂದ ಬಾಬುರಾವ್ ಚಿಂಚನಸೂರ ಅವರಿಗೆ ಬಿಜೆಪಿ ಮುಖಂಡರು ಸೂಕ್ತ ಸ್ಥಾನಮಾನ ನೀಡುವುದಾಗಿ ಹೇಳಿದ್ದರು.
ಚಿಂಚನಸೂರ ಅವರಿಗೆ ಸಚಿವ ಸ್ಥಾನ ನೀಡಲು ಆಗ್ರಹ
ಈ ಹಿಂದೆ ನೀಡಿದ ಭರವಸೆಯಂತೆ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ, ಸಚಿವ ಸ್ಥಾನ ನೀಡುವ ಮೂಲಕ ಕೋಲಿ ಸಮುದಾಯಕ್ಕೆ ಪ್ರಾತಿನಿಧ್ಯತೆ ದೊರಕಿಸಿಕೊಡಬೇಕೆಂದು ಒತ್ತಾಯಿಸಿದರು.