ಕಲಬುರಗಿ: ಈ ಬಾರಿಯ ಸಂಪುಟ ವಿಸ್ತರಣೆ ವೇಳೆ ಕಲ್ಯಾಣ ಕರ್ನಾಟಕ ಭಾಗದವರಿಗೆ ಯಾರಿಗಾದರೂ ಒಬ್ಬರಿಗೆ ಸಚಿವ ಸ್ಥಾನ ಕೊಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪಗೆ ಸಂಸದ ಡಾ. ಉಮೇಶ್ ಜಾಧವ್ ಒತ್ತಾಯ ಮಾಡಿದ್ದಾರೆ.
ಕಲ್ಯಾಣ ಕರ್ನಾಟಕಕ್ಕೆ ಮಂತ್ರಿ ಸ್ಥಾನ ನೀಡಿ: ಸಂಸದ ಉಮೇಶ್ ಜಾಧವ್ ಒತ್ತಾಯ - ministerial position
ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಾಚನೆ ಬಗ್ಗೆ ರಾಜ್ಯದಲ್ಲಿ ಭಾರೀ ಚರ್ಚೆ ನಡೆಯುತ್ತಿದ್ದು, ಕಲ್ಯಾಣ ಕರ್ನಾಟಕದ ಭಾಗದ ಒಬ್ಬರಿಗಾದರೂ ಸಚಿವ ಸ್ಥಾನ ನೀಡುವಂತೆ ಸಂಸದ ಡಾ. ಉಮೇಶ್ ಜಾಧವ್ ಒತ್ತಾಯಿಸಿದ್ದಾರೆ.
ಸಂಸದ ಡಾ. ಉಮೇಶ ಜಾಧವ್
ಕಲಬುರಗಿಯಲ್ಲಿ ಮಾತನಾಡಿದ ಅವರು, ಸಂಪುಟದಲ್ಲಿ ಈ ಭಾಗದವರು ಯಾರೂ ಇಲ್ಲ. ಈ ಭಾಗದ ಯಾರಿಗಾದರೂ ಪರವಾಗಿಲ್ಲ. ಒಬ್ಬರಿಗಾದರೂ ಸಚಿವ ಸ್ಥಾನವನ್ನು ನೀಡಬೇಕೆಂದು ಮುಖ್ಯಮಂತ್ರಿಯವರಲ್ಲಿ ಜಾಧವ್ ಕೇಳಿಕೊಂಡರು. ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್ ಮುಖ್ಯಮಂತ್ರಿ ಬಳಿ ತೆರಳುತ್ತಿದ್ದು, ಅವರ ಮೂಲಕ ಯಡಿಯೂರಪ್ಪನವರಿಗೆ ಈ ಸಂದೇಶ ಕಳಿಸುತ್ತಿರುವುದಾಗಿ ತಿಳಿಸಿದ್ದಾರೆ.