ಕರ್ನಾಟಕ

karnataka

ETV Bharat / state

ಬಟ್ಟೆ ತೊಳೆಯುವಾಗ ಕಾಲು ಜಾರಿ ಹೊಂಡದಲ್ಲಿ ಬಿದ್ದ ಯುವತಿ, ಬಾಲಕಿ: ಮುಗಿಲು ಮುಟ್ಟಿದ ಪೋಷಕರ ಆಕ್ರಂದನ - ಹೊಂಡದಲ್ಲಿ ಬಿದ್ದು ಮೃತ

ಬಟ್ಟೆ ತೊಳೆಯಲು ಹೋಗಿದ್ದ ಇಬ್ಬರು ಹೊಂಡದಲ್ಲಿ ಬಿದ್ದು ಮೃತಪಟ್ಟಿರುವ ಘಟನೆ ಶಹಬಾದ್ ತಾಲೂಕಿನಲ್ಲಿ ನಡೆದಿದೆ.

ಕಾಲು ಜಾರಿ ಹೊಂಡದಲ್ಲಿ ಬಿದ್ದ ಯುವತಿ
ಕಾಲು ಜಾರಿ ಹೊಂಡದಲ್ಲಿ ಬಿದ್ದ ಯುವತಿ

By

Published : Nov 11, 2022, 8:32 PM IST

ಕಲಬುರಗಿ:ಬಟ್ಟೆ ತೊಳೆಯಲು ಹೋಗಿದ್ದ ಒಬ್ಬ ಯುವತಿ ಹಾಗೂ ಬಾಲಕಿ ಕಾಲು ಜಾರಿ ಹೊಂಡಕ್ಕೆ ಬಿದ್ದು ಸಾವನ್ನಪ್ಪಿದ ಘಟನೆ ಶಹಬಾದ್ ತಾಲೂಕಿನ ರಾಮಘಡ್ ಆಶ್ರಯ ಕಾಲೋನಿಯಲ್ಲಿ ಶುಕ್ರವಾರ ನಡೆದಿದೆ.

ಮಾಣಿಕಮ್ಮ ದಾಸರ್ (20), ಕೀರ್ತಿಕಾ (12) ಮೃತಪಟ್ಟವರು. ಮೃತರು ರಾಮಘಡ್ ಆಶ್ರಯ ಕಾಲೋನಿ ನಿವಾಸಿಗಳಾಗಿದ್ದಾರೆ. ಇಂದು ಮಧ್ಯಾಹ್ನ ಬಟ್ಟೆ ತೊಳೆಯಲು ಹೊಂಡಕ್ಕೆ ತೆರಳಿದಾಗ ಅವಘಡ ನಡೆದಿದೆ. ಹೆಣ್ಣು ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಈ ಕುರಿತು ಶಹಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(ಓದಿ: ಮುಳುಗುತ್ತಿದ್ದ ತಮ್ಮನನ್ನು ರಕ್ಷಿಸಲು ಹೋದ ಮೂವರು ಸಹೋದರಿಯರೂ ನೀರುಪಾಲು!)

ABOUT THE AUTHOR

...view details