ಕಲಬುರಗಿ: ನೀರಿನ ಕಣಿವೆಯಲ್ಲಿ ಬಿದ್ದ ಸ್ನೇಹಿತೆಯನ್ನು ಕಾಪಾಡಲು ಹೋದ ಬಾಲಕಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮದಲ್ಲಿ ನಡೆದಿದೆ.
ಕಾಲುಜಾರಿ ಕಣಿವೆಗೆ ಬಿದ್ದ ಗೆಳತಿ ರಕ್ಷಿಸಲು ಹೋಗಿ ಬಾಲಕಿ ದುರ್ಮರಣ - girl death news in kalburgi
ಬಟ್ಟೆ ತೊಳೆಯಲು ಹೋಗಿದ್ದ ವೇಳೆ ಕಾಲು ಜಾರಿ ನೀರಿನ ಕಣಿವೆಯಲ್ಲಿ ಬಿದ್ದ ಗೆಳತಿಯನ್ನು ರಕ್ಷಿಸಿಲು ಹೋಗಿ ಬಾಲಕಿಯೋರ್ವಳು ಮೃತಪಟ್ಟಿರುವ ದುರ್ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕು ವ್ಯಾಪ್ತಿಯಲ್ಲಿ ನಡೆದಿದೆ.
![ಕಾಲುಜಾರಿ ಕಣಿವೆಗೆ ಬಿದ್ದ ಗೆಳತಿ ರಕ್ಷಿಸಲು ಹೋಗಿ ಬಾಲಕಿ ದುರ್ಮರಣ girl died in lake](https://etvbharatimages.akamaized.net/etvbharat/prod-images/768-512-8618189-138-8618189-1598798317224.jpg)
ಬಾಲಕಿ ದುರ್ಮರಣ
ಹಲಕರ್ಟಿ ಗ್ರಾಮದ ನಿವಾಸಿ ಗುರಮ್ಮ ಕೊಡಚಿ (14) ಮೃತ ಬಾಲಕಿ. ಪಾಳುಬಿದ್ದ ನೀರಿನ ಕಣಿಯಲ್ಲಿ ಬಟ್ಟೆ ಒಗೆಯಲು ಹೋದಾಗ ಕಾಲುಜಾರಿ ನೀರಿಗೆ ಬಿದ್ದು ದುರ್ಘಟನೆ ಸಂಭವಿಸಿದೆ.
ಪಾಳುಬಿದ್ದ ಕಣಿಯಲ್ಲಿ ಬಟ್ಟೆ ಒಗೆಯಲು ಮೂವರು ಸ್ನೇಹಿತೆಯರು ಹೋಗಿದ್ದ ವೇಳೆ ಕಾಲುಜಾರಿ ಓರ್ವ ಬಾಲಕಿ ನೀರಿಗೆ ಬಿದ್ದಿದ್ದಾಳೆ. ತಕ್ಷಣ ಗೆಳತಿಯನ್ನು ರಕ್ಷಿಸಲು ಇಬ್ಬರು ಬಾಲಕಿಯರು ನೀರಿಗೆ ಹಾರಿದ್ದಾರೆ. ಅವರಲ್ಲಿ ಇಬ್ಬರನ್ನು ಸ್ಥಳೀಯರು ರಕ್ಷಿಸಿದ್ದಾರೆ. ದುರದೃಷ್ಟವಶಾತ್ ಓರ್ವ ಬಾಲಕಿ ಮೃತಪಟ್ಟಿದ್ದಾಳೆ. ಈ ಕುರಿತು ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.