ಕಲಬುರಗಿ: ಪ್ರೀತಿಸಿ ಮದುವೆಯಾಗಲು ನಿರಾಕರಿಸಿದ ಯುವಕನಿಗೆ ಯುವತಿ ಪೊಲೀಸ್ ಠಾಣೆ ಮುಂದೆಯೇ ಥಳಿಸಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಪಟ್ಟಣ ಗ್ರಾಮದ ನಿವಾಸಿ ಇರ್ಫಾನ್ ಮತ್ತು ಬೆಂಗಳೂರಿನ ನಿವಾಸಿ ರಹೀನಾ (ಹೆಸರು ಬದಲಿಸಲಾಗಿದೆ) ಕಳೆದ ಆರು ವರ್ಷದಿಂದ ಪ್ರೀತಿಸುತ್ತಿದ್ದರು. ಮಹಾನಗರದಲ್ಲಿ ಐದು ವರ್ಷಗಳ ಕಾಲ ಜೊತೆ, ಜೊತೆಯಲ್ಲಿ ಓಡಾಡಿದ್ದಾರೆ. ಆದರೀಗ ಮದುವೆ ಆಗಲ್ಲ ಅಂತ ಯುವಕ ಕೈಕೊಟ್ಟು ಬಂದಿದ್ದಾನೆ ಎಂದು ಆರೋಪಿಸಿರುವ ಯುವತಿ ಕಲಬುರಗಿಗೆ ಹುಡುಕಿಕೊಂಡು ಬಂದಿದ್ದಾಳೆ.
ಪ್ರೀತಿಸಿ ಬೆಂಗಳೂರೆಲ್ಲಾ ಸುತ್ತಾಡಿ ನಡತೆ ಸರಿ ಇಲ್ಲ ಎಂದ ಯುವಕ ಕಳೆದ ವರ್ಷ ಕಲಬುರಗಿಯ ಸಬ್‌ರಿಜಿಸ್ಟಾರ್ ಕಚೇರಿಯಲ್ಲಿ ಇವರು ಮದುವೆ ರಿಜಿಸ್ಟಾರ್ ಮಾಡಿಕೊಂಡಿದ್ದರು. ಆ ಬಳಿಕ ಯುವಕ ಮದುವೆಯಾಗಲು ನಿರಾಕರಿಸಿದ್ದಾನೆ. ರಹೀನಾಗೆ ಬೇರೆ ಯುವಕರ ಜೊತೆ ಅಕ್ರಮ ಸಂಬಂಧ ಇದೆ. ಆಕೆಯ ನಡತೆ ಸರಿ ಇಲ್ಲ ಎಂದು ಬೆಂಗಳೂರಿನಲ್ಲೇ ಬಿಟ್ಟು ಬಂದಿರುವುದಾಗಿ ಹೇಳಿದ್ದ.
ಪ್ರೀತಿಸಿ ಮದುವೆಯಾಗಲು ನಿರಾಕರಿಸಿದವನಿಗೆ ಯುವತಿ ಕೊಟ್ಟಳು ಗೂಸಾ ಇದೀಗ ಯುವತಿ ಆತನನ್ನು ಹುಡುಕಿಕೊಂಡು ಕಲಬುರಗಿಗೆ ಬಂದಿದ್ದಾಳೆ. ಅಷ್ಟೇ ಅಲ್ಲ, ಮದುವೆ ಆಗುವವರೆಗೂ ಬಿಡಲ್ಲ ಎಂದು ಪಟ್ಟುಹಿಡಿದು ಕುಳಿತಿದ್ದಾಳೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಮೂಡಿಗೆರೆ: ಬೃಹತ್ ಗಾತ್ರದ ಕಾಳಿಂಗ ಸರ್ಪ ರಕ್ಷಣೆ