ಕಲಬುರಗಿ: ಇಲ್ಲಿನ ತಾಲೂಕೊಂದರ ಗ್ರಾಮದಲ್ಲಿ ಹಿಂದೂ ಬಾಲಕಿಯನ್ನು ನಾಲ್ಕು ಜನ ಅನ್ಯ ಧರ್ಮದ ಹುಡುಗರು ಹೊತ್ತೊಯ್ದು ಅತ್ಯಾಚಾರ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿಗೆ ಈಗ ತಿರುವು ಸಿಕ್ಕಿದೆ. 'ತನ್ನ ಮೇಲೆ ಅತ್ಯಾಚಾರ ನಡೆದಿಲ್ಲ, ಸುಖಾಸುಮ್ಮನೆ ನಮ್ಮ ಮರ್ಯಾದೆ ಹರಾಜು ಮಾಡಲಾಗುತ್ತಿದೆ' ಎಂದು ಬಾಲಕಿ ಹೇಳಿದ್ದಾಳೆ.
'ಕಿಡಿಗೇಡಿಗಳು ಮಾನಸಿಕ ನೆಮ್ಮದಿ ಹಾಳು ಮಾಡಿದ್ದಾರೆ':
ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವಿಡಿಯೋ ನೋಡಿ ನೇರವಾಗಿ ಪೊಲೀಸರು ನಮ್ಮ ಮನೆಗೆ ತಡರಾತ್ರಿ ಆಗಮಿಸಿ ಇಡೀ ರಾತ್ರಿ ವಿಚಾರಣೆ ನಡೆಸಿದರು. ಒಂದು ವೇಳೆ ನನ್ನ ಮೇಲೆ ಅತ್ಯಾಚಾರ ನಡೆದಿದ್ದರೆ ನಾನೇ ಖುದ್ದಾಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡುತ್ತಿದ್ದೆ. ಕಿಡಿಗೇಡಿಗಳು ಸುಖಾಸುಮ್ಮನೆ ನನ್ನ ಮೇಲೆ ಅತ್ಯಾಚಾರ ನಡೆಯದಿದ್ದರೂ ನನ್ನ ಹಾಗೂ ನಮ್ಮ ಕುಟುಂಬದ ಮಾನ ಹರಾಜು ಮಾಡಿ ಮಾನಸಿಕ ನೆಮ್ಮದಿ ಹಾಳು ಮಾಡಿದ್ದಾರೆ ಎಂದು ಬಾಲಕಿ ಬೇಸರ ವ್ಯಕ್ತಪಡಿಸಿದಳು.