ಕರ್ನಾಟಕ

karnataka

ETV Bharat / state

ಜಿಮ್ಸ್​​ ಆಸ್ಪತ್ರೆ ಅತ್ಯಾಚಾರಿಯ ಹಳೆ ಪುರಾಣದ ವಿಡಿಯೋ ವೈರಲ್​​

ಆರೋಪಿ ಪ್ರೇಮಸಾಗರ ಜೂನ್ 9ರಂದು ಜಿಮ್ಸ್ ಕೋವಿಡ್ ವಾರ್ಡ್​ನಲ್ಲಿ 25ವರ್ಷದ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಮಾನಸಿಕ ಖಿನ್ನತೆಗೊಳಗಾಗಿದ್ದ ಮಹಿಳೆ ಕೆಲ ದಿನಗಳ ಬಳಿಕ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಳು. ಸದ್ಯ ಆರೋಪಿ ಪ್ರೇಮ್ ಸಾಗರ್ ಸೆರೆವಾಸ ಅನುಭವಿಸುತ್ತಿದ್ದಾನೆ.

gims-hospital-rapist-old-video-viral
ಜಿಮ್ಸ್​​ ಆಸ್ಪತ್ರೆ ಅತ್ಯಾಚಾರ

By

Published : Jun 21, 2021, 11:03 PM IST

ಕಲಬುರಗಿ: ಜಿಮ್ಸ್ ಆಸ್ಪತ್ರೆಯಲ್ಲಿ ನಡೆದ ಅತ್ಯಾಚಾರ ಯತ್ನ ಪ್ರಕರಣದ ಆರೋಪಿ ಈ ಹಿಂದೆ ಮತ್ತೊಬ್ಬ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿ ಬೌನ್ಸರ್ಸ್​ಗಳ ಕೈಯಲ್ಲಿ ಒದೆ ತಿಂದ್ದಿದ್ದ ಎನ್ನುವ ಮಾಹಿತಿ ತಡವಾಗಿ ಬೆಳಕಿಗೆ ಬಂದಿದ್ದು, ಘಟನೆಯ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಜಿಮ್ಸ್​​ ಆಸ್ಪತ್ರೆ ಅತ್ಯಾಚಾರಿಯ ಹಳೆ ಪುರಾಣದ ವಿಡಿಯೋ ವೈರಲ್​​..!

ಆರೋಪಿ ಪ್ರೇಮಸಾಗರ ಜೂನ್ 9ರಂದು ಜಿಮ್ಸ್ ಕೋವಿಡ್ ವಾರ್ಡ್​ನಲ್ಲಿ 25ವರ್ಷದ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಮಹಿಳೆ ಕೆಲ ದಿನಗಳ ಬಳಿಕ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಳು. ಸದ್ಯ ಆರೋಪಿ ಪ್ರೇಮ್ ಸಾಗರ್ ಸೆರೆವಾಸ ಅನುಭವಿಸುತ್ತಿದ್ದಾನೆ. ಆರೋಪಿ ಈ ಹಿಂದೆಯೂ ಆಸ್ಪತ್ರೆಯ ಲಿಫ್ಟಿನಲ್ಲಿ ಮತ್ತೊಬ್ಬ ಮಹಿಳೆಯೊಂದಿಗೆ ಇದೇ ರೀತಿ ಅಸಭ್ಯವಾಗಿ ವರ್ತಿಸಿ ಸಿಕ್ಕಿಬಿದ್ದು ಧರ್ಮದೇಟು ತಿಂದಿದ್ದ ಎನ್ನುವ ಸಂಗತಿ ಬಹಿರಂಗವಾಗಿದೆ.

ಅಲ್ಲದೆ ಆಸ್ಪತ್ರೆಯಲ್ಲಿ ಬೌನ್ಸರ್ಸ್​ಗಳು ಆರೋಪಿಯನ್ನು ಕೊಠಡಿಯಲ್ಲಿ ಕೂಡಿ ಹಾಕಿ ಥಳಿಸಿದ್ದರು. ಇಷ್ಟಾದರೂ ಬುದ್ಧಿ ಕಲಿಯದ ಕಾಮುಕ ಆರೋಪಿ ಮತ್ತೆ ಹೀನ ಕೃತ್ಯಕ್ಕೆ ಕೈಹಾಕಿ ಜೈಲು ಸೇರಿದ್ದಾನೆ. ಮುಂಚೆ ಸಹ ಇಂತಹದೇ ಒಂದು ಘಟನೆ ಆಸ್ಪತ್ರೆಯಲ್ಲಿ ನಡೆದರು ಸಹ ಆಸ್ಪತ್ರೆ ಆಡಳಿತ ಮಂಡಳಿ ಹೆಚ್ಚೆತ್ತಕೊಳ್ಳದಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ABOUT THE AUTHOR

...view details