ಕಲಬುರಗಿ :ನಗರದ ಚಂದ್ರಶೇಖರ್ ಪಾಟೀಲ್ ಕ್ರೀಡಾಂಗಣದ ಹಿಂಬದಿಯಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷವಾಗಿದ್ದು, ಸಾರ್ವಜನಿಕರನ್ನು ಭಯಗೊಳಿಸಿದೆ.
ಕ್ರೀಡಾಂಗಣದ ಹಿಂಬದಿಯಲ್ಲಿ ಮೊಸಳೆಗಳ ಠಿಕಾಣಿ : ಆತಂಕದಲ್ಲಿ ಜನತೆ - crocodile news
ಮಳೆ ನೀರಿನಿಂದ ಕೆರೆಯಂತಾದ ಸ್ಥಳದಲ್ಲಿ ಮೊಸಳೆ ಠಿಕಾಣಿ ಹೂಡಿದೆ. ಅರಣ್ಯ ಅಧಿಕಾರಿಗಳು ಮೊಸಳೆಯನ್ನು ಸೆರೆ ಹಿಡಿದು ಸ್ಥಳಾಂತರಿಸಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ. ಮೊಸಳೆಗಳಿರುವ ಸ್ಥಳಕ್ಕೆ ತೆರಳದಂತೆ ಅರಣ್ಯಾಧಿಕಾರಿಗಳು ಸೂಚನೆ ನೀಡಿದ್ದಾರೆ..
![ಕ್ರೀಡಾಂಗಣದ ಹಿಂಬದಿಯಲ್ಲಿ ಮೊಸಳೆಗಳ ಠಿಕಾಣಿ : ಆತಂಕದಲ್ಲಿ ಜನತೆ crocodile appears near kalburgi stadium](https://etvbharatimages.akamaized.net/etvbharat/prod-images/768-512-12369699-thumbnail-3x2-crocodile.jpg)
ಮೊಸಳೆ
ಸುಮಾರು 12 ಅಡಿ ಉದ್ದದ ಬೃಹತ್ ಗಾತ್ರದ ಮೊಸಳೆ ಕಾಣಿಸಿಕೊಂಡಿದ್ದು, ಜನ ಆತಂಕದಲ್ಲಿದ್ದಾರೆ. ಕಳೆದ ಹಲವು ದಿನಗಳಿಂದ ಈ ಸ್ಥಳದಲ್ಲಿ ಬೃಹತ್ ಮೊಸಳೆಗಳು ಕಾಣಿಸಿಕೊಳ್ತಿವೆ. ಇದರಿಂದ ಸ್ಥಳೀಯರು ಭಯದಲ್ಲೇ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮಳೆ ನೀರಿನಿಂದ ಕೆರೆಯಂತಾದ ಸ್ಥಳದಲ್ಲಿ ಮೊಸಳೆ ಠಿಕಾಣಿ ಹೂಡಿದೆ. ಅರಣ್ಯ ಅಧಿಕಾರಿಗಳು ಮೊಸಳೆಯನ್ನು ಸೆರೆ ಹಿಡಿದು ಸ್ಥಳಾಂತರಿಸಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ. ಮೊಸಳೆಗಳಿರುವ ಸ್ಥಳಕ್ಕೆ ತೆರಳದಂತೆ ಅರಣ್ಯಾಧಿಕಾರಿಗಳು ಸೂಚನೆ ನೀಡಿದ್ದಾರೆ.