ಕಲಬುರಗಿ : ಜನರೇಟರ್ ಸ್ಫೋಟಗೊಂಡು ಜನರೇಟರ್ ರೂಮ್ ಹೊತ್ತಿ ಉರಿದ ಘಟನೆ ಸೂಪರ್ ಮಾರ್ಕೆಟ್ ನಲ್ಲಿ ನಡೆದಿದೆ. ಬೆಂಕಿ ನಂದಿಸುವ ವೇಳೆ ಅಗ್ನಿಶಾಮಕ ಸಿಬ್ಬಂದಿ ಲೋ ಬಿಪಿಯಾಗಿ ಕುಸಿದುಬಿದ್ದ ಹಿನ್ನೆಲೆ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಅವರು ಸಾವನ್ನಪ್ಪಿದ್ದಾರೆ.
ಕಲಬುರಗಿಯಲ್ಲಿ ಜನರೇಟರ್ ಸ್ಫೋಟ : ಬೆಂಕಿ ನಂದಿಸುವ ವೇಳೆ ಕುಸಿದುಬಿದ್ದಿದ್ದ ಅಗ್ನಿಶಾಮಕ ಸಿಬ್ಬಂದಿ ಸಾವು - ಕಲಬುರಗಿಯಲ್ಲಿ ಜನರೇಟರ್ ಸ್ಫೋಟ ಬೆಂಕಿ ನಂದಿಸುವ ವೇಳೆ ಅಗ್ನಿಶಾಮಕ ಸಿಬ್ಬಂದಿ ಅಸ್ವಸ್ಥ
Generator explosion in Kalaburagi: ಕೆನರಾ ಬ್ಯಾಂಕ್ ನ ಹಿಂಭಾಗದಲ್ಲಿ ಜನರೇಟರ್ ಸಲುವಾಗಿ ಪ್ರತ್ಯೇಕ ಕೋಣೆಯನ್ನು ನಿರ್ಮಿಸಲಾಗಿತ್ತು. ಭಾನುವಾರ ಸಂಜೆ ಏಕಾಏಕಿಯಾಗಿ ಜನರೇಟರ್ ಬ್ಲಾಸ್ಟ್ ಆಗಿದೆ.

ಕೆನರಾ ಬ್ಯಾಂಕ್ ನ ಹಿಂಭಾಗದಲ್ಲಿ ಜನರೇಟರ್ ಸಲುವಾಗಿ ಪ್ರತ್ಯೇಕ ಕೋಣೆಯನ್ನು ನಿರ್ಮಿಸಲಾಗಿತ್ತು. ಭಾನುವಾರ ಸಂಜೆ ಏಳು ಗಂಟೆ ಸುಮಾರಿಗೆ ಏಕಾ ಏಕಿಯಾಗಿ ಜನರೇಟರ್ ಸ್ಫೋಟಗೊಂಡಿದೆ. ನೋಡ ನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ಸಂಪೂರ್ಣ ಕೋಣೆ ಆವರಿಸಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದರು.
ಈ ವೇಳೆ ಅಗ್ನಿಶಾಮಕ ಸಿಬ್ಬಂಧಿಯೊರ್ವನಿಗೆ ಲೋ ಬಿಪಿಯಾಗಿ ಕುಸಿತ ಬಿದ್ದಿದ್ದರು. ತಕ್ಷಣ ಅವರನ್ನು ನಗರದ ಜಯದೇವ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ. ಈ ಕುರಿತು ಬ್ರಹ್ಮಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.