ಕಲಬುರಗಿ: ಕೊರೊನಾ ಹಿನ್ನೆಲೆ ಜಿಲ್ಲೆಯಲ್ಲಿ ಈ ಬಾರಿ ಗಣೇಶ ಹಬ್ಬವನ್ನು ಸರಳವಾಗಿ ಆಚರಿಸಲಾಗುತ್ತಿದೆ. ಜಿಲ್ಲೆಯಾದ್ಯಂತ ಇಂದು ಐದನೇ ದಿನದ ಗಣೇಶ ನಿಮಜ್ಜನ ನಡೆಯಿತು.
ಕಲಬುರಗಿ: ಸರಳವಾಗಿ ಐದನೇ ದಿನದ ಗಣೇಶ ನಿಮಜ್ಜನ - Ganesha Nimajjana in Kalaburgi news
ಪಾಲಿಕೆ ಸಿಬ್ಬಂದಿ ಹೊಂಡದಲ್ಲಿ ಮೂರ್ತಿಗಳನ್ನು ನಿಮಜ್ಜನ ಮಾಡುತ್ತಿದ್ದಾರೆ. ಕ್ರೇನ್ ಸಹಾಯದಿಂದ ಹೊಂಡದ ಮಧ್ಯದಲ್ಲಿ ದೊಡ್ಡ ಗಣೇಶ ಮೂರ್ತಿಗಳನ್ನು ಬಿಡಲಾಗುತ್ತಿದೆ.
ನಗರದ ಪ್ರಸಿದ್ಧ ಅಪ್ಪನ ಕೆರೆಯಲ್ಲಿ ಗಣೇಶ ಮೂರ್ತಿಗಳ ನಿಮಜ್ಜನ ಮಾಡಲಾಯಿತು. ಯಾವುದೇ ಮೆರವಣಿಗೆಯಿಲ್ಲದೆ ಗಣೇಶ ಮೂರ್ತಿಗಳನ್ನು ಕೊಂಡೊಯ್ಯಲಾಗುತ್ತಿದೆ. ಅಪ್ಪನ ಕೆರೆಗೆ ಹೊಂದಿಕೊಂಡಿರುವ ಹೊಂಡದಲ್ಲಿ ನಿಮಜ್ಜನ ಮಾಡಲು ಮಹಾನಗರ ಪಾಲಿಕೆಯಿಂದ ವ್ಯವಸ್ಥೆ ಮಾಡಲಾಗಿದೆ.
ನಗರದ ವಿವಿಧೆಡೆಯಿಂದ ಗಣೇಶ ಮೂರ್ತಿಗಳನ್ನು ತೆಗೆದುಕೊಂಡು ಬಂದು ಹೊಂಡದಲ್ಲಿ ನಿಮಜ್ಜನ ಮಾಡಲಾಗುತ್ತಿದೆ. ನಾಗರಿಕರು, ಪಾಲಿಕೆ ಸಿಬ್ಬಂದಿಗೆ ಗಣೇಶ ಮೂರ್ತಿಯನ್ನು ಹಸ್ತಾಂತರಿಸುತ್ತಿದ್ದಾರೆ. ಪಾಲಿಕೆ ಸಿಬ್ಬಂದಿ ಹೊಂಡದಲ್ಲಿ ಮೂರ್ತಿಗಳನ್ನು ನಿಮಜ್ಜನ ಮಾಡುತ್ತಿದ್ದಾರೆ. ಕ್ರೇನ್ ಸಹಾಯದಿಂದ ಹೊಂಡದ ಮಧ್ಯದಲ್ಲಿ ದೊಡ್ಡ ಗಣೇಶ ಮೂರ್ತಿಗಳನ್ನು ಬಿಡಲಾಗುತ್ತಿದೆ.