ಕಲಬುರಗಿ:ಗಣೇಶ ಹಬ್ಬ ಬಂದರೆ ಯುವ ಸಮುದಾಯಕ್ಕೆ ಸಂತಸ. ಹಬ್ಬದ ಆಚರಣೆಯ ಬರದಲ್ಲಿ ಪರಿಸರಕ್ಕೆ ಹಾನಿಯಾಗುತ್ತೋ, ಇಲ್ಲವೋ ಎನ್ನುವುದನ್ನು ಯೋಚಿಸುವುದಿಲ್ಲ. ಆದರೆ ಜಿಲ್ಲೆಯ ಯುವಕರು ಮಾತ್ರ ಪರಿಸರ ಪ್ರೇಮಿ ಗಣೇಶ ಪ್ರತಿಷ್ಠಾಪನೆ ಮಾಡಿದ್ದಲ್ಲದೆ ನಿಮ್ಮಜ್ಜನ ವೇಳೆಯೂ ಪರಿಸರ ಕಾಳಜಿ ಮೆರೆದಿದ್ದಾರೆ.
ಗಣೇಶ ನಿಮಜ್ಜನದಲ್ಲೂ ಪರಿಸರ ಪ್ರೇಮ ಮೆರೆದ ಕಲಬುರಗಿ ಯುವಕರು! - ಗಣೇಶ ನಿಮಜ್ಜನ
ಗಣೇಶ ಹಬ್ಬ ಬಂದರೆ ಯುವ ಸಮುದಾಯಕ್ಕೆ ಸಂತಸ. ಹಬ್ಬದ ಆಚರಣೆಯ ಬರದಲ್ಲಿ ಪರಿಸರಕ್ಕೆ ಹಾನಿಯಾಗುತ್ತೋ, ಇಲ್ಲವೋ ಎನ್ನುವುದನ್ನು ಯೋಚಿಸುವುದಿಲ್ಲ. ಆದರೆ ಜಿಲ್ಲೆಯ ಯುವಕರು ಮಾತ್ರ ಪರಿಸರ ಪ್ರೇಮಿ ಗಣೇಶ ಪ್ರತಿಷ್ಠಾಪನೆ ಮಾಡಿದ್ದಲ್ಲದೆ ನಿಮ್ಮಜ್ಜನ ವೇಳೆಯೂ ಪರಿಸರ ಕಾಳಜಿ ಮೆರೆದಿದ್ದಾರೆ.
ನಗರದ ಶಹಾಬಜಾರ ಬಡಾವಣೆಯಲ್ಲಿನ ರಾಮಮಂದಿರ ಯುವಕರ ಬಳಗ ಕಳೆದ 21 ವರ್ಷಗಳಿಂದ ವಿನಾಯಕನ ಪ್ರತಿಷ್ಠಾಪನೆ ಮಾಡುತ್ತಿದ್ದು, ಮೂರು ವರ್ಷದಿಂದ ಮಣ್ಣಿನ ಗಣೇಶನನ್ನು ಪ್ರತಿಷ್ಠಾಪಿಸಿ ಪರಿಸರ ಪ್ರೇಮ ಮೆರೆಯುತ್ತಿದ್ದಾರೆ. ಇನ್ನು ಗಣೇಶನ ನಿಮಜ್ಜನಕ್ಕೆ ಎತ್ತಿನ ಬಂಡಿಯನ್ನು ಬಳಸಿದ್ದು, ಇದರ ಜೊತೆಗೆ ಜನಪದ ಗೀತೆ, ವಾದ್ಯ, ತಮಟೆ ಮೇಳದೊಂದಿಗೆ ನಿಮ್ಮಜ್ಜನ ಮಾಡುವ ಮೂಲಕ ಯುವಕರು ಇತರರಿಗೆ ಮಾದರಿಯಾಗಿದ್ದಾರೆ.
ಇನ್ನು ಈ ಯುವಕರು ಗಣೇಶ ಮೂರ್ತಿಯನ್ನು ಖರೀದಿಸದೇ ಸ್ವತಃ ತಾವೇ ಮಣ್ಣಿನಿಂದ ತಯಾರಿಸಿಸಿದ್ದಾರೆ. ಅದೇ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದು, ಸುಮಾರು ಮೂರು ಕ್ವಿಂಟಾಲ್ ಭಾರವಾದ ಬೃಹತ್ ಗಾತ್ರದ ವಿನಾಯಕನ ಮೂರ್ತಿ ಯುವಕರ ಕೈಯಿಂದ ಅರಳಿ ನಿಂತಿದೆ. ಇಂದು ಅದರ ನಿಮಜ್ಜನ ಕಾರ್ಯ ನಡೆದಿದೆ.