ಕರ್ನಾಟಕ

karnataka

ETV Bharat / state

ಜನವಸತಿ ಪ್ರದೇಶದಲ್ಲಿ ಸೋಂಕಿತನ ಅಂತ್ಯಕ್ರಿಯೆ, ಸಾರ್ವಜನಿಕರ ಆಕ್ರೋಶ - ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಕ್ರಿಯೆ

ಆರೋಗ್ಯ ಇಲಾಖೆ ಸಿಬ್ಬಂದಿ ಕಳೆದ ರಾತ್ರಿ ಅಂತ್ಯಕ್ರಿಯೆ ನಡೆಸಿದ್ದಾರೆ. ಸೋಂಕಿತ ವ್ಯಕ್ತಿಯ ಕುಟುಂಬದವರು ಸಹ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಖಬರಸ್ತಾನ ಸುತ್ತಮುತ್ತಲು ಅನೇಕ ಮನೆಗಳಿರುವ ಕಾರಣ ಕೊರೊನಾ ಹರಡುವ ಆತಂಕ ಹೆಚ್ಚಿದೆ..

Kalburgi
ಕಲಬುರಗಿ

By

Published : Jul 5, 2020, 5:59 PM IST

ಕಲಬುರ್ಗಿ :ಜನವಸತಿ ಪ್ರದೇಶದಲ್ಲಿನ ಖಬರಸ್ತಾನದಲ್ಲಿ ಕೊರೊನಾ ಸೋಂಕಿತ ವ್ಯಕ್ತಿ ಅಂತ್ಯಕ್ರಿಯೆ ಮಾಡಿಲಾಗಿದ್ದು ಅಂತ್ಯಕ್ರಿಯೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿರೋ ಘಟನೆ ನಗರದ ವಿಜಯ ನಗರದಲ್ಲಿ ನಡೆದಿದೆ.

ಜನವಸತಿ ಪ್ರದೇಶದಲ್ಲಿ ಸೋಂಕಿತನ ಅಂತ್ಯಕ್ರಿಯೆ..

ಆರೋಗ್ಯ ಇಲಾಖೆ ಸಿಬ್ಬಂದಿ ಕಳೆದ ರಾತ್ರಿ ಅಂತ್ಯಕ್ರಿಯೆ ನಡೆಸಿದ್ದಾರೆ. ಸೋಂಕಿತ ವ್ಯಕ್ತಿಯ ಕುಟುಂಬದವರು ಸಹ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಖಬರಸ್ತಾನ ಸುತ್ತಮುತ್ತಲು ಅನೇಕ ಮನೆಗಳಿರುವ ಕಾರಣ ಕೊರೊನಾ ಹರಡುವ ಆತಂಕ ಹೆಚ್ಚಿದೆ. ಹೀಗಾಗಿ ನಗರದಲ್ಲಿ ಅಂತ್ಯಕ್ರಿಯೆ ಬದಲಾಗಿ ನಗರದಿಂದ ಹೊರಗೆ ಅಂತ್ಯಕ್ರಿಯೆ ಮಾಡುವಂತೆ ಜನರ ಆಗ್ರಹಿಸಿದರು.

ಆದರೂ ನಿಗದಿತ ಸ್ಥಳದಲ್ಲೇ ಅಂತ್ಯಕ್ರಿಯೆ ನಡೆಸಿ ಹೋಗಿರುವ ಕುಟುಂಬದ ಸದಸ್ಯರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details