ಕಲಬುರಗಿ:ಲಾಕ್ಡಾನ್ ಜಾರಿಯಿಂದಾಗಿ ವ್ಯಾಪಾರವಿಲ್ಲದೆ, ಜೀವನ ಸಾಗಿಸುವುದು ಕಷ್ಟವಾಗಿ ಮನನೊಂದಿದ್ದ ಹಣ್ಣಿನ ವ್ಯಾಪಾರಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಮೋಮಿನ್ಪೂರ್ ಬಡಾವಣೆಯಲ್ಲಿ ನಡೆದಿದೆ.
ಲಾಕ್ಡೌನ್ ತಂದ ಆಪತ್ತು: ಮನನೊಂದು ಕಲಬುರಗಿಯಲ್ಲಿ ಹಣ್ಣಿನ ವ್ಯಾಪಾರಿ ಆತ್ಮಹತ್ಯೆಗೆ ಶರಣು
ರಂಜಾನ್ ಹಬ್ಬಕ್ಕೆ ಮಾರಾಟ ಮಾಡಲೆಂದು ಲಕ್ಷಾಂತರ ರೂ. ಸಾಲ ಮಾಡಿ ಮುಂಗಡವಾಗಿ ಹಣ್ಣು ಖರೀದಿಸಿದ್ದ ವ್ಯಾಪಾರಿಯೊಬ್ಬ ಲಾಕ್ಡೌನ್ನಿಂದ ನಷ್ಟ ಅನುಭವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಹಣ್ಣು ವ್ಯಾಪಾರಿ ಆತ್ಮಹತ್ಯೆ
ಅಬ್ದುಲ್ ಖದೀರ್ (32) ನೇಣಿಗೆ ಶರಣಾದ ವ್ಯಾಪಾರಿ. ರಂಜಾನ್ ಹಬ್ಬಕ್ಕೆ ಮಾರಾಟ ಮಾಡಲೆಂದು ಲಕ್ಷಾಂತರ ರೂ. ಸಾಲ ಮಾಡಿ ಮುಂಗಡವಾಗಿ ಹಣ್ಣು ಖರೀದಿಸಿದ್ದ. ಆದರೆ ಲಾಕ್ಡೌನ್ ಪ್ರಾರಂಭವಾದ ಬಳಿಕ ಹಣ್ಣು ಮಾರಾಟ ಮಾಡಲಾಗಿಲ್ಲ. ಇದರಿಂದ ಜೀವನ ಸಾಗಿಸಲಾಗದೆ, ನಷ್ಟ ಉಂಟಾಗಿ ಮನನೊಂದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಈ ಕುರಿತು ಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.