ಕಲಬುರಗಿ:ಕಲಬುರಗಿ ಮಹಾನಗರ ಪಾಲಿಕೆಯವರು ಕೊರೊನಾ ಸೋಂಕಿತರಿಗಾಗಿ ಉಚಿತ ಆಟೋ ಆಂಬ್ಯುಲೆನ್ಸ್ ಸೇವೆ ಶುರು ಮಾಡಿದ್ದಾರೆ.
ಕೊರೊನಾ ರೋಗಿಗಳಿಗೆ ಕಲಬುರಗಿಯಲ್ಲಿ ಉಚಿತ ಆಟೋ ಆಂಬ್ಯುಲೆನ್ಸ್ ಸೇವೆ ಆರಂಭ - Free Auto Ambulance for Corona Patients
ಕಲಬುರಗಿಯಲ್ಲಿ ಕೊರೊನಾ ಸೋಂಕಿತರಿಗಾಗಿ ಆಂಬ್ಯುಲೆನ್ಸ್ ವಾಹನಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಅದುವೇ ಆಟೋ ಆಂಬ್ಯುಲೆನ್ಸ್. ಇವುಗಳು ದಿನದ 24 ಗಂಟೆಯೂ ಸೇವೆಗೆ ಲಭ್ಯ.
ದಿನದ 24 ಗಂಟೆ, ವಾರದ 7 ದಿನವೂ ಐದು ಆಟೋ ಆಂಬ್ಯುಲೆನ್ಸ್ಗಳು ಜನರ ಸೇವೆಗೆ ಲಭ್ಯವಿರಲಿವೆ. ಈ ವ್ಯವಸ್ಥೆಯನ್ನು ಸೂಕ್ತ ರೀತಿಯಲ್ಲಿ ನೋಡಿಕೊಳ್ಳಲು ಡ್ರೈವರ್ಗಳು ಹಾಗೂ ಓರ್ವ ಸುಪರ್‌ವೈಸರ್ ಅನ್ನು ಪಾಲಿಕೆ ವತಿಯಿಂದ ನಿಯೋಜಿಸಲಾಗಿದೆ. ಬೆಳಗ್ಗೆ 8 ರಿಂದ ರಾತ್ರಿ 10 ರವರೆಗೆ ಆಟೋ ಡ್ರೈವರ್ ಶೇಖ್ ರಶೀದ್ ಮೊಬೈಲ್ ಸಂಖ್ಯೆ 9060637888, ಶೇಖ್ ಶಬ್ಬಿರ್ ಮೊಬೈಲ್ ಸಂಖ್ಯೆ 9900562301 ಹಾಗೂ ರವಿಚಂದ್ರ ಎಂಬವರ ಮೊಬೈಲ್ ಸಂಖ್ಯೆ 9035853125 ಗೆ ಕರೆ ಮಾಡಿ ಜನರು ಸೇವೆ ಪಡೆದುಕೊಳ್ಳಬಹುದು.
ಅದೇ ರೀತಿ ರಾತ್ರಿ 10 ರಿಂದ ಬೆಳಗ್ಗಿನ 8 ಗಂಟೆಯವರೆಗೆ ಆಟೋ ಡ್ರೈವರ್ ಇಸಾಕ್ ಎಂಬವರ ಮೊಬೈಲ್ ಸಂಖ್ಯೆ 9538369631 ಹಾಗೂ ಶಕೀಲ ಮಿಯಾ ಮೊಬೈಲ್ ಸಂಖ್ಯೆ 7676704268 ಗೆ ಸಂಪರ್ಕಿಸಬಹುದಾಗಿದೆ. ಇದಲ್ಲದೇ ಸುಪರ್‌ವೈಸರ್ ಪ್ರೇಮ ಶಿಲ್ದ್ ಅವರ ಮೊಬೈಲ್ ಸಂಖ್ಯೆ 9483855538ಗೆ ಕರೆ ಮಾಡಬಹುದು.