ಕಲಬುರಗಿ:ಕೊರೊನಾ ರೋಗಿಗಳಿಗೆ ತುರ್ತು ಸೇವೆ ಒದಗಿಸುವ ನಿಟ್ಟಿನಲ್ಲಿ ಹಾಗೂ ಮಹಾಮಾರಿಯಿಂದ ಮೃತಪಟ್ಟವರಿಗೆ ಗೌರವಯುತ ಅಂತ್ಯಸಂಸ್ಕಾರ ನೇರವೇರಿಸಲು ಜಿಲ್ಲಾ ಕಾಂಗ್ರೆಸ್, ಆರೋಗ್ಯ ಹಸ್ತ ಅಭಿಯಾನದಡಿ ಉಚಿತ ಆಂಬುಲೆನ್ಸ್ ಸೇವೆಗೆ ಚಾಲನೆ ನೀಡಲಾಗಿದೆ.
ಬಳಿಕ ಮಾತನಾಡಿದ ಶಾಸಕ ಪ್ರಿಯಾಂಕ್ ಖರ್ಗೆ, ಜಿಲ್ಲೆಯಲ್ಲಿ ಕೊರೊನಾ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆಕ್ಸಿಜನ್ ಬೆಡ್ ಕೊರತೆಯಿಂದಾಗಿ ಅನೇಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಸಕಾಲಕ್ಕೆ ಆಂಬುಲೆನ್ಸ್ ಸಿಗದೆ ಪರದಾಡುವಂತ ಪರಿಸ್ಥಿತಿ ಇದೆ. ಸೋಂಕಿತರು ಮೃತಪಟ್ಟರೆ ಶವ ಸಾಗಿಸಲು ವಾಹನಗಳ ಕೊರತೆಯೂ ಇದೆ. ಹೀಗಾಗಿ ಆಂಬುಲೆನ್ಸ್ ಸಮಸ್ಯೆ ನೀಗಿಸಲು ಹಾಗೂ ಬಡ ರೋಗಿಗಳಿಗೆ ನೆರವಾಗುವ ಉದ್ದೇಶದಿಂದ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಉಚಿತ ಆಂಬುಲೆನ್ಸ್ ಸೇವೆ ಆರಂಭಿಸಲಾಗಿದೆ ಎಂದು ತಿಳಿಸಿದರು.