ಕಲಬುರಗಿ:ಒಂದು ಕಾರಿಗೆ 2 ಲಕ್ಷ ರೂಪಾಯಿ ಕೊಟ್ಟು ಕಾರು ಖರೀದಿ ಮಾಡಿ, ಬಾಡಿಗೆ ರೂಪದಲ್ಲಿ ನೀಡಿ ಪ್ರತಿ ತಿಂಗಳು 10 ಸಾವಿರ ರೂಪಾಯಿ ಖಾತೆಗೆ ಹಾಕುವುದಾಗಿ ಹೇಳಿದ್ದ ಖಾಸಗಿ ಟ್ರಾವೆಲಿಂಗ್ ಕಂಪನಿಯೊಂದು ಷೇರುದಾರರಿಗೆ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಖಾಸಗಿ ಕಾರ್ ಟ್ರಾವೆಲಿಂಗ್ ಕಂಪನಿ ವಿರುದ್ಧ ವಂಚನೆ ಆರೋಪ.. - ಟ್ರಾವೆಲಿಂಗ್ ಕಂಪನಿಯಿಂದ ಷೇರುದಾರರಿಗೆ ವಂಚನೆ
ಖಾಸಗಿ ಕಾರ್ ಟ್ರಾವೆಲಿಂಗ್ ಕಂಪನಿಯೊಂದು ಷೇರುದಾರರಿಗೆ ವಂಚನೆ ಮಾಡಿರುವ ಪ್ರಕರಣ ಕಲಬುರಗಿಯಲ್ಲಿ ಬೆಳಕಿಗೆ ಬಂದಿದೆ.
ಬೆಂಗಳೂರು ಮೂಲದ ಯೆಲ್ಲೋ ಎಕ್ಸ್ಪ್ರೆಸ್ ಲಾಜಿಸ್ಟಿಕ್ಸ್ ಕಂಪನಿ ಕೋಟ್ಯಾಂತರ ರೂಪಾಯಿ ವಂಚಿಸಿದೆ ಎಂದು ಷೇರುದಾರರು ಆರೋಪಿಸಿದ್ದಾರೆ. ಒಂದು ಕಾರಿಗೆ 2 ಲಕ್ಷ ರೂಪಾಯಿಯಂತೆ ಕಲಬುರ್ಗಿ ಜಿಲ್ಲೆಯೊಂದರಿಂದಲೇ 2.10 ಕೋಟಿಗೂ ಹೆಚ್ಚು ಹಣ ಹೂಡಿಕೆ ಮಾಡಲಾಗಿತ್ತು. ಕಾರು ಖರೀದಿ ಮಾಡಿ, ಬಾಡಿಗೆ ರೂಪದಲ್ಲಿ ನೀಡಿ ಪ್ರತಿ ತಿಂಗಳು 10 ಸಾವಿರ ರೂಪಾಯಿ ಖಾತೆಗೆ ಹಾಕುವುದಾಗಿ ಕಂಪನಿ ಹೇಳಿತ್ತು. ಆದರೆ, ಬಂಡವಾಳ ಹೂಡಿಕೆ ಮಾಡಿದ ನಂತರ ಕಂಪನಿ ಲಾಕ್‌ಔಟ್ ಮಾಡಿದೆ. ಕಂಪನಿಯ ವಿರುದ್ಧ ಈಗಾಗಲೇ ಸಿಐಡಿ ತನಿಖೆ ಸಹ ನಡೆಸಿದೆ. ಆದರೆ, ಯಾವೊಬ್ಬ ಷೇರುದಾರರಿಗೂ ಪೊಲೀಸರು ಸರಿಯಾದ ಮಾಹಿತಿ ನೀಡುತ್ತಿಲ್ಲ. ಇದರಿಂದಾಗಿ ಷೇರುದಾರರು ಕಂಗಾಲಾಗುವಂತಾಗಿದೆ.
ಜೀವನಕ್ಕೆ ಆಧಾರವಾಗುತ್ತದೆ ಎಂಬ ಮಹದಾಸೆಯೊಂದಿಗೆ ಕಲಬುರಗಿಯಲ್ಲಿ 45ಕ್ಕೂ ಅಧಿಕ ಷೇರುದಾರರು, ಯೆಲ್ಲೋ ಎಕ್ಸ್ಪ್ರೆಸ್ ಲಾಜಿಸ್ಟಿಕ್ಸ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದ್ದಾರೆ.ಇದೀಗ ಕಂಪನಿ ಆಡಳಿತ ಮಂಡಳಿ ವಂಚಿಸಿ ತಲೆಮರೆಸಿಕೊಂಡಿದೆ. ಹೇಗಾದರೂ ಮಾಡಿ ನಮ್ಮ ಹಣ ಮರಳಿಸಿ ಎಂದು ಷೇರುದಾರರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
TAGGED:
kalaburgi latest crime news