ಕಲಬುರಗಿ: ಚಿತ್ತಾಪುರ ತಾಲೂಕಿನ ಕದ್ದರಗಿ ಗ್ರಾಮದಲ್ಲಿ ನರಿ ದಾಳಿಗೆ ಜನ ಬೆಚ್ಚಿಬಿದ್ದಿದ್ದಾರೆ. ರಾತ್ರೋರಾತ್ರಿ ಪ್ರತ್ಯಕ್ಷವಾಗುವ ನರಿಗಳು ಗ್ರಾಮದ 6 ಜನರು ಹಾಗೂ ಒಂದು ಆಕಳ ಕರು ಮೇಲೆರಗಿ ಗಂಭೀರ ಗಾಯಗೊಳಿಸಿದೆ.
ದ್ಯಾವಪ್ಪ ದಂಡಗುಂಡ, ಮಲ್ಲಮ್ಮ, ದೊಡ್ಡಪ್ಪ ಕುಂಬಾರ ಎಂಬುವವರು ಗಾಯಗೊಂಡು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮದ ಕಾಡಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನರಿಗಳಿವೆ. ಬೆಳಗಿನ ಜಾವ ಗ್ರಾಮದ ಸುತ್ತಮುತ್ತ ಬರುತ್ತಿವೆ ಎಂದು ಗ್ರಾಮಸ್ಥರು ಹೇಳಿದ್ದಾರೆ.